ಪ್ರಕಾಶಕರು ದಂಡದಿಂದ ಪಾರಾಗಲು ತಕ್ಷಣವೇ ಪ್ರೆಸ್ ಸೇವಾ ಪೋರ್ಟಲ್ ಮೂಲಕ ವರದಿ
ಬಳ್ಳಾರಿ, 17 ಜೂನ್ (ಹಿ.ಸ.) : ಆ್ಯಂಕರ್ : ಭಾರತ ಸರ್ಕಾರದ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು (ಮಾಹಿತಿ ಮತ್ತು ಪ್ರಸಾರ ಸಚಿವಾಲಯ) ದೇಶದ ಎಲ್ಲಾ ನೋಂದಾಯಿತ ನಿಯತಕಾಲಿಕೆಗಳ ಪ್ರಕಾಶಕರು 2024-25ರ ಆರ್ಥಿಕ ವರ್ಷದ ಆಡಿಟ್ ಮಾಡಲಾದ ವಾರ್ಷಿಕ ಹೇಳಿಕೆಯನ್ನು 2026 ನೇ ಜೂನ್ 30 ರ ಒಳಗಾಗಿ ಸಲ್ಲಿಸುವಂತ
ಪ್ರಕಾಶಕರು ದಂಡದಿಂದ ಪಾರಾಗಲು ತಕ್ಷಣವೇ ಪ್ರೆಸ್ ಸೇವಾ ಪೋರ್ಟಲ್ ಮೂಲಕ ವರದಿ


ಬಳ್ಳಾರಿ, 17 ಜೂನ್ (ಹಿ.ಸ.) :

ಆ್ಯಂಕರ್ : ಭಾರತ ಸರ್ಕಾರದ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು (ಮಾಹಿತಿ ಮತ್ತು ಪ್ರಸಾರ ಸಚಿವಾಲಯ) ದೇಶದ ಎಲ್ಲಾ ನೋಂದಾಯಿತ ನಿಯತಕಾಲಿಕೆಗಳ ಪ್ರಕಾಶಕರು 2024-25ರ ಆರ್ಥಿಕ ವರ್ಷದ ಆಡಿಟ್ ಮಾಡಲಾದ ವಾರ್ಷಿಕ ಹೇಳಿಕೆಯನ್ನು 2026 ನೇ ಜೂನ್ 30 ರ ಒಳಗಾಗಿ ಸಲ್ಲಿಸುವಂತೆ, ತಪ್ಪಿದಲ್ಲಿ ಭಾರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಸರ್ಕಾರ ಹೊರಡಿಸಿರುವ ‘ಸಲಹಾ ಸೂಚನೆ ಸಂಖ್ಯೆ 11 ರ ಪ್ರಕಾರ, ‘ಪ್ರೆಸ್ ಮತ್ತು ನಿಯತಕಾಲಿಕೆಗಳ ನೋಂದಣಿ ಕಾಯ್ದೆ, 2023' ರ ಸೆಕ್ಷನ್ 7 ರ ಅಡಿಯಲ್ಲಿ ಪ್ರತಿ ನೋಂದಾಯಿತ ನಿಯತಕಾಲಿಕೆಯು ನಿಗದಿತ ಅವಧಿಯೊಳಗೆ ತನ್ನ ವಾರ್ಷಿಕ ಹೇಳಿಕೆಯನ್ನು ‘ಪ್ರೆಸ್ ಸೇವಾ ಪೋರ್ಟಲ್' ಮೂಲಕ ಆನ್ಲೈನ್ನಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ.

ಕಾಯ್ದೆಯ ಸೆಕ್ಷನ್ 14 ರ ಪ್ರಕಾರ, ಹಣಕಾಸು ವರ್ಷ ಮುಗಿದ ಒಂದು ವರ್ಷದೊಳಗೆ ವರದಿ ಸಲ್ಲಿಸಲು ವಿಫಲರಾಗುವ ಪ್ರಕಾಶಕರು ದಂಡನೆಗೆ ಗುರಿಯಾಗಲಿದ್ದಾರೆ.

ದಂಡದ ವಿವರಗಳು

ಮೊದಲ ಬಾರಿಯ ಸುಸ್ತಿದಾರರಿಗೆ : ನಿಗದಿತ ದಿನಾಂಕದೊಳಗೆ ವರದಿ ಸಲ್ಲಿಸದಿದ್ದರೆ ಕನಿಷ್ಠ ರೂ. 10,000/- (ಹತ್ತು ಸಾವಿರ ರೂಪಾಯಿ) ದಂಡ ವಿಧಿಸಲಾಗುತ್ತದೆ.

ಮುಂದಿನ ಸರಣಿ ವೈಫಲ್ಯಗಳಿಗೆ : ಪ್ರತಿ ನಂತರದ ವರ್ಷದ ಸುಸ್ತಿಗೆ ದಂಡದ ಮೊತ್ತವು ದುಪ್ಪಟ್ಟಾಗುತ್ತ ಹೋಗುತ್ತದೆ (ಉದಾಹರಣೆಗೆ ಎರಡನೇ ಬಾರಿಗೆ ರೂ. 20,000/-).

ಗರಿಷ್ಠ ದಂಡದ ಮಿತಿ : ಈ ದಂಡದ ಮೊತ್ತವು ಗರಿಷ್ಠ ರೂ. 2,00,000/- (ಎರಡು ಲಕ್ಷ ರೂಪಾಯಿ) ವರೆಗೆ ತಲುಪಬಹುದು.

ಕಾಲಾವಕಾಶ ವಿಸ್ತರಣೆ ಇಲ್ಲ

ಸರ್ಕಾರವು ಜೂನ್ 30, 2026 ರ ಗಡುವಿನ ನಂತರ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ವಿಸ್ತರಿಸುವುದಿಲ್ಲ ಎಂದು ತಿಳಿಸಿದ್ದು, ನಿಯಮ ಉಲ್ಲಂಘಿಸುವ ಪ್ರಕಾಶಕರಿಂದ ಕಡ್ಡಾಯವಾಗಿ ದಂಡ ವಸೂಲಿ ಮಾಡಲಾಗುವುದು ಎಂದು ಪ್ರೆಸ್ ಡೆಪ್ಯುಟಿ ಪ್ರೆಸ್ ರಿಜಿಸ್ಟ್ರಾರ್ ಜನರಲ್ ರತ್ನಾಕರ್ ಪಾಮುಲಾ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande