ಕೊಪ್ಪಳ : ಸುವರ್ಣ ದಾಖಲೆಯಾದ ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿ
ಕೊಪ್ಪಳ, 17 ಜೂನ್ (ಹಿ.ಸ.) : ಆ್ಯಂಕರ್ : ವಿಶ್ವ ಚೆಸ್ ಅಕಾಡೆಮಿ(ರಿ) ಕೊಪ್ಪಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ “2ನೇ ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿ-2026” ಹಾಗೂ “ವಿಶ್ವ ರಾಯಲ್
State level chess tournament sets a golden record


State level chess tournament sets a golden record


ಕೊಪ್ಪಳ, 17 ಜೂನ್ (ಹಿ.ಸ.) :

ಆ್ಯಂಕರ್ : ವಿಶ್ವ ಚೆಸ್ ಅಕಾಡೆಮಿ(ರಿ) ಕೊಪ್ಪಳ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ “2ನೇ ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿ-2026” ಹಾಗೂ “ವಿಶ್ವ ರಾಯಲ್ ಚೆಸ್ ಅರಿನ-2026 ಸಭೆ” ಯಶಸ್ವಿಯಾಗಿ ನಡೆಯಿತು.

ಈ ಪಂದ್ಯಾವಳಿಯಲ್ಲಿ ರಾಜ್ಯದಿಂದ ಸುಮಾರು 170 ಸ್ಪರ್ಧಾಳುಗಳು ಭಾಗವಹಿಸಿದ್ದು, ವಿಶೇಷವಾಗಿ ರಾಜ್ಯಾದ್ಯಂತ ಬಂದಿದ್ದ ಸುಮಾರು 30 ರೇಟೆಡ್ ಆಟಗಾರರು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲೇ ಒಂದು ಸುವರ್ಣ ದಾಖಲೆಯಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಷ್ಟೇ ಅಲ್ಲದೇ ನೆರೆಯ ಆಂಧ್ರಪ್ರದೇಶದಿಂದಲೂ ಸಹ ಆಟಗಾರರು ಆಗಮಿಸಿ, ಈ ಪಂದ್ಯಾವಳಿಯ ಹಿರಿಮೆಯನ್ನು ಹೆಚ್ಚಿಸಿದ್ದರು. ವಿಜೇತ ಆಟಗಾರರಿಗೆ ಒಟ್ಟಾರೆಯಾಗಿ 40 ಬಹುಮಾನಗಳನ್ನು ವಿತರಿಸಲಾಯಿತು.

ಚದುರಂಗ ಆಟದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಕ್ಕೆ ಹಲವು ಪ್ರಮುಖ ಗಣ್ಯರು ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸಿದರು. ಶ್ರೀ ಗವಿಸಿದ್ದೇಶ್ವರ ಬಿಸರಳ್ಳಿ ಶಾಖಾ ಮಠದ ಪರಮ ಪೂಜ್ಯ ಶ್ರೀ ಶಿವಶಾಂತವೀರ ಸ್ವಾಮೀಜಿಗಳು ಬಹುಮಾನ ವಿತರಣಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ್, ವಿಶ್ವ ಚೇಸ್ ಅಕಾಡೆಮಿಯ ಅಧ್ಯಕ್ಷರಾದ ರಾಮಸ್ವರೂಪ್ ಕಾಂಬ್ಳೇಕರ್, ಐ.ಎ ಪ್ರಮೋದ ಮೋರೆ, ಕಾವ್ಯಾ ಪ್ರಸನ್ನ ಗಡಾದ, ನಿತಿನ್ ಕರ್ಪೂರ್, ಡಾ. ಗಿರೀಶ್ ಹಿರೇಮಠ, ಡಾ. ಪ್ರಶಾಂತ್ ಸುಶೀಲ್ ಕಲಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷ ಕೃತಜ್ಞತೆಗಳು: ರಾಜ್ಯ ಮಟ್ಟದ ಚದುರಂಗ ಪಂದ್ಯಾವಳಿಯ ಯಶಸ್ವಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ನೀಡಿದ ಅಮೂಲ್ಯವಾದ ಬೆಂಬಲವನ್ನು ಹಾಗೂ ಸಹಕಾರಕ್ಕಾಗಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಾದ ವಿಠ್ಠಲ್ ಜಾಬಗೌಡರ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿಗಳು ಮತ್ತು ಕೀರ್ತಿವರ್ಧನ್ ಹಾಗೂ ವಿಮಲ್ರಾಜ್ ಅವರಿಗೆ ಶ್ರೀರಾಮಸ್ವರೂಪ್ ಕಾಂಬ್ಳೇಕರ್ ಅವರು ವಿಶೇಷ ಧನ್ಯವಾದಗಳನ್ನು ತಿಳಿಸಿದರು.

ವಿಜೇತರ ವಿವರ: ಓಪನ್ ಕೆಟಗರಿಯಲ್ಲಿ ನಂದಕುಮಾರ್ ಅವರು ಪ್ರಥಮ ಸ್ಥಾನ ಪಡೆದರೆ, ಸಂಗಪ್ಪ ಎಸ್. ದ್ವಿತಿಯ, ಪ್ರಹ್ಲಾದ ಎಸ್. ತೃತೀಯ, ನಾಗರಾಜ್ ಕುಲಕರ್ಣಿ ಚತುರ್ಥ, ನಂದಕೀಶೋರ್ ಎಸ್. ಅವರು ಪಂಚಮ ಸ್ಥಾನ ಪಡೆದುಕೊಂಡರು. ವಿಶೇಷ ಕೆಟಗರಿಯಲ್ಲಿ ಸೀನಿಯರ್ 50+ ಕೆಟಗರಿಯಲ್ಲಿ ಶಿವಕುಮಾರ ಡಿ. ಹಾಗೂ ಸ್ಥಳೀಯ ಕೆಟಗರಿಯಲ್ಲಿ ಶರಣ ಕತ್ತಿ ಮತ್ತು ಮಹಿಳೆಯರ ಕೆಟಗರಿಯಲ್ಲಿ ವಿಜಯಲಕ್ಷ್ಮಿ ಅವರು ಪ್ರಥಮ ಸ್ಥಾನವನ್ನು ಪಡೆದುಕೊಂಡರು.

ಅದೇ ರೀತಿ ವಿಶ್ವ ಚೇಸ್ ಅಕಾಡೆಮಿ ಕೆಟಗರಿಯಲ್ಲಿ ದಿವ್ಯಾ ಕಾಂಬ್ಳೇಕರ್ ಪ್ರಥಮ ಸ್ಥಾನ ಪಡೆದುಕೊಂಡರೆ, ಅಂಡರ್ 16 ಬಾಲಕರ ಕೆಟಗರಿಯಲ್ಲಿ ಆದಿತ್ಯ ಹರಿದಾಸ್, ಅಂಡರ್ 16 ಬಾಲಕಿಯರ ಕೆಟಗರಿಯಲ್ಲಿ ಸಿಂಚನಾ ಗಿರೀಶ್, ಅಂಡರ್ 13 ಬಾಲಕರ ಕೆಟಗರಿಯಲ್ಲಿ ಸಾತ್ವಿಕ್ ಎಸ್. ಹಾಗೂ ಅಂಡರ್ 13 ಬಾಲಕಿಯರ ಕೆಟಗರಿಯಲ್ಲಿ ಯಶ್ವಿ ರಾವಲ್, ಅಂಡರ್ 10 ಬಾಲಕರ ಕೆಟಗರಿಯಲ್ಲಿ ವಿಹಾನ್ ಭದ್ರಾವತಿ ಮತ್ತು ಅಂಡರ್ 10 ಬಾಲಕಿಯರ ಕೆಟಗರಿಯಲ್ಲಿ ಪಾಮ್ಡಿ ಶೇಖ್ ಅಂಜುಮ್ ಅವರು ಪ್ರಥಮ ಸ್ಥಾನ ಪಡೆದರು. ವಿಶೇಷವಾಗಿ ಮೂರು ವರ್ಷದ ಕಿರಿಯ ಆಟಗಾರ್ತಿ ಕಾಜಾ ಸ್ವಕ್ಷ ಮತ್ತು ಶ್ರೀನಿರ್ವಿ ಅವರಿಗೆ ಯಂಗೆಸ್ಟ್ ಪ್ಲೇಯರ್ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande