


ಕೊಪ್ಪಳ, 17 ಜೂನ್ (ಹಿ.ಸ.) :
ಆ್ಯಂಕರ್ : ನಗರಸಭೆ ಆವರಣದ ಬಲ್ಡೋಟ ಹಾಗೂ ಕಾರ್ಖಾನೆ ಮಾಲಿನ್ಯ ವಿರೋಧಿ 230ನೇ ದಿನದ ಅನಿರ್ದಿಷ್ಟಾವಧಿ ಧರಣಿ ಯಶಸ್ವಿಯಾಯಿತು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ಬಲ್ಡೋಟ ಕಂಪನಿಯ ಬೃಹತ್ ಹೂಡಿಕೆ ವಿರೋಧಿಸಿ, ತಾಲೂಕಿನ 28 ಮಾಲಿನ್ಯಕಾರಿ ಬೃಹತ್ ಕಾರ್ಖಾನೆಗಳನ್ನು ಜನರ ಆರೋಗ್ಯ, ಜೀವ ಉಳಿಸಲು ಶಾಶ್ವತವಾಗಿ ಬಂದ್ ಮಾಡಬೇಕೆಂದು, ಬಸಾಪುರ ಕೆರೆ ಮೂಕ್ತಗೊಳಿಸಲು, ನಗರದ ಪೂರ್ವ ಭಾಗದಲ್ಲಿ 2011ರಿಂದ ಬಲ್ಡೋಟ ಮಾಲಿಕತ್ವದ ಎಂಎಸ್ಪಿಎಲ್ ಪೆಲ್ಲೆಟ್ ಘಟಕದ ಕಂದು ಧೂಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದ್ದು ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಕಾಪಾಡಬೇಕೆಂದು, ತುಂಗಭದ್ರಾ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು, ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು, ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಧರಣಿ ಮುಂದುವರೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ರಾಜಶೇಖರ ಏಳುಭಾವಿ, ಮಹಾದೇವಪ್ಪ ಮಾವಿನಮಡು,ನಾಗರತ್ನ ಪಿ. ಮಾದಿನೂರು, ಬಸವರಾಜಪ್ಪ ಶೆಟ್ಟರ್, ವಿದ್ಯಾರ್ಥಿಗಳಾದ ಸುನಿಲ್ ಜಿನ್ನಾಪೂರ, ಪ್ರಶಾಂತ ಬೀಡನಾಳ, ಅರುಣ ಕುಮಾರ, ವಿದ್ಯಾರ್ಥಿನಿ ತೇಜಶ್ವಿನಿ ಆಡಿನ್, ಮಖಬೂಲ್ ರಾಯಚೂರು, ರೈತ ಸಂಘದ ಈಶಪ್ಪ ಕುಟ್ಟ, ರಾಮಣ್ಣ ಕುಟ್ಟ, ಶಿವಪ್ಪ ಕುಟ್ಟ, ಗಾಳೆಪ್ಪ ಎಚ್. ಇಂದರಗಿ, ವೆಂಕಣ್ಣಾಚಾರ ಬಿ. ಕಟ್ಟಿ, ಶಾಂತಮ್ಮ, ಯಶೋಧ ಗಡ್ಡಿ, ಅಮರೇಗೌಡ ಸಂಗೀತ ಶಿಕ್ಷಕರು, ಪವಿತ್ರಾ, ಗವಿಸಿದ್ದಪ್ಪ ಚಿಕ್ಕೇನಕೊಪ್ಪ, ಶಿವಪ್ಪ ಜಲ್ಲಿ, ಗಂಗಮ್ಮ ಕುರುಗೋಡು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್