ಯುವಶಕ್ತಿಗೆ ಉದ್ಯೋಗದ ಆಸರೆ : ಕೆ.ವಿ. ಪ್ರವೀಣ್
ಬಳ್ಳಾರಿ, 17 ಜೂನ್ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ’ ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಯುವಕರಿಗೆ ಆರ್ಥಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಉದ್ಯೋಗದಾತರು ಮತ್ತು ಮೊದಲ ಬಾರಿಗೆ ಕೆಲಸಕ್ಕೆ
Employment is the backbone of youth power- K.V. Praveen


ಬಳ್ಳಾರಿ, 17 ಜೂನ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ’ ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಯುವಕರಿಗೆ ಆರ್ಥಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಉದ್ಯೋಗದಾತರು ಮತ್ತು ಮೊದಲ ಬಾರಿಗೆ ಕೆಲಸಕ್ಕೆ ಸೇರುವ ಯುವಕರಿಗೆ ಉತ್ತೇಜನ ನೀಡಲು ಆಸರೆಯಾಗಲಿದೆ ಎಂದು ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಆಯುಕ್ತ ಕೆ.ವಿ. ಪ್ರವೀಣ್ ಅವರು ಹೇಳಿದರು.

ನಗರದ ರಾಘವೇಂದ್ರ ಕಾಲೋನಿಯ ಎರಡನೇ ಹಂತದಲ್ಲಿರುವ ಪಿಎಫ್ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ’ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಹೊಸ ಉದ್ಯೋಗ ಸೃಷ್ಟಿ ಹಾಗೂ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ. ಈ ಯೋಜನೆಯ ಪ್ರಮುಖ ಗುರಿ ದೇಶದಲ್ಲಿ ಬರೋಬ್ಬರಿ 3.5 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಸೃಷ್ಟಿಯಾದ ಉದ್ಯೋಗಗಳಲ್ಲಿ ಉದ್ಯೋಗಿಗಳು ಸ್ಥಿರವಾಗಿ ಮುಂದುವರಿಯುವಂತೆ ಪೆÇ್ರೀತ್ಸಾಹಿಸುವುದಾಗಿದೆ ಎಂದರು.

ಈ ಯೋಜನೆಯು ಆಗಸ್ಟ್ 1, 2025 ರಿಂದ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿದ್ದು, ಜುಲೈ 31, 2027 ರವರೆಗೆ ಒಟ್ಟು ಎರಡು ವರ್ಷಗಳ ಕಾಲ ಚಾಲ್ತಿಯಲ್ಲಿರಲಿದೆ. ದೇಶಾದ್ಯಂತ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ರೂ. 1 ಲಕ್ಷ ಕೋಟಿ ಮೊತ್ತದ ಬಜೆಟ್ ಅನ್ನು ಮೀಸಲಿಟ್ಟಿದೆ ಎಂದು ವಿವರಿಸಿದರು.

ಭಾರತ ಸರ್ಕಾರದ ಭವಿಷ್ಯ ನಿಧಿ ಸಂಸ್ಥೆಯ ವ್ಯಾಪ್ತಿಗೆ ಒಳಪಡುವ (ಪಿಎಫ್ ಕವರ್ ಆಗಿರುವ) ಎಲ್ಲಾ ಖಾಸಗಿ ಸಂಸ್ಥೆಗಳು, ಸೇವಾ ವಲಯದ ಕಂಪನಿಗಳು, ಉತ್ಪಾದನಾ ವಲಯ, ಸೆಕ್ಯೂರಿಟಿ ಏಜೆನ್ಸಿಗಳು ಹಾಗೂ ಮ್ಯಾನ್ಪವರ್ ಏಜೆನ್ಸಿಗಳು ಈ ಯೋಜನೆಗೆ ಅರ್ಹವಾಗಿವೆ.

ಮುಖ್ಯವಾಗಿ ಇದು ಕೇವಲ ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಕೆಲಸದಲ್ಲಿರುವ ಹಳೇ ಉದ್ಯೋಗಿಗಳಿಗೆ ಇದು ಅನ್ವಯಿಸುವುದಿಲ್ಲ. ಹೊಸ ಉದ್ಯೋಗಿ ಕನಿಷ್ಠ 6 ತಿಂಗಳು ಅದೇ ಸಂಸ್ಥೆಯಲ್ಲಿ ಕೆಲಸ ಮುಂದುವರಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ಈ ಯೋಜನೆಗಾಗಿ ಪ್ರತ್ಯೇಕ ಅಧಿಕೃತ ಪೆÇೀರ್ಟಲ್

ಆರಂಭಿಸಲಾಗಿದ್ದು, ಉದ್ಯೋಗದಾತರು ಇಲ್ಲಿ ಸುಲಭವಾಗಿ ಒನ್-ಟೈಮ್ ನೋಂದಣಿ ಮಾಡಿಕೊಳ್ಳಬಹುದು.

ನೌಕರರು ಇದಕ್ಕೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕಂಪನಿಗಳು ಹೊಸ ನೌಕರರ ಪಿಎಫ್ ಖಾತೆಯನ್ನು ಆಧಾರ್ ಕಾರ್ಡ್ಗೆ ಲಿಂಕ್ ಮಾಡಿದಾಗ ಸಿಸ್ಟಮ್ ಸ್ವಯಂಚಾಲಿತವಾಗಿ ಅರ್ಹತೆಯನ್ನು ಪರಿಶೀಲಿಸಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ ಎಂದರು.

ಪಿಎಫ್ ವ್ಯಾಪ್ತಿಯಲ್ಲಿ ಬರುವ ಸಂಸ್ಥೆಗಳಿಗೆ ಅವರು ನೇಮಿಸಿಕೊಳ್ಳುವ ಹೊಸ ಉದ್ಯೋಗಿಗಳ ಸಂಬಳದ ಆಧಾರದ ಮೇಲೆ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ಇನ್ಸೆಂಟಿವ್ (ಪೆÇ್ರೀತ್ಸಾಹಧನ) ಸಿಗಲಿದೆ. ಸೇವಾ ವಲಯದ ಕಂಪನಿಗಳಿಗೆ 2 ವರ್ಷಗಳ ಕಾಲ (24 ತಿಂಗಳು) ಈ ಇನ್ಸೆಂಟಿವ್ ಸಿಗಲಿದೆ.

ಉತ್ಪಾದನಾ ವಲಯದ ಕಂಪನಿಗಳಿಗೆ ವಿಶೇಷ ಉತ್ತೇಜನ ನೀಡಲು 4 ವರ್ಷಗಳ ಕಾಲ (48 ತಿಂಗಳು) ಇನ್ಸೆಂಟಿವ್ ಅವಧಿಯನ್ನು ವಿಸ್ತರಿಸಲಾಗಿದೆ. ಹೊಸದಾಗಿ ಸೇರ್ಪಡೆಯಾಗುವ ಉದ್ಯೋಗಿಗಳಿಗೆ ಗರಿಷ್ಠ ರೂ. 15,000 ವರೆಗೆ ಒಮ್ಮೆಯ ಇನ್ಸೆಂಟಿವ್ ಸಿಗಲಿದ್ದು, ಇದನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.

ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿ ಭವಿಷ್ಯ ನಿಧಿ ಖಾತೆ ಪಡೆಯುತ್ತಿರುವ ಹೊಸ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ. ಬಳ್ಳಾರಿ ವಲಯದಲ್ಲಿ ಇದುವರೆಗೆ ಇಂತಹ 1,374 ಹೊಸ ಕಾರ್ಮಿಕರು ಈ ಯೋಜನೆಯಡಿ ನೇರ ಹಣಕಾಸು ನೆರವು ಪಡೆಯಲು ಅರ್ಹರಾಗಿದ್ದಾರೆ. ಈ ಭಾಗದಡಿ ಉದ್ಯೋಗಿಗಳಿಗೆ ನೇರ ಲಾಭ ಸಿಗದಿದ್ದರೂ, ಉದ್ಯೋಗದಾತ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುತ್ತದೆ.

ಉದಾಹರಣೆಗೆ, ಒಬ್ಬ ಉದ್ಯೋಗಿ ಈ ಹಿಂದೆ ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡಿ ಯುಎನ್ ಸಂಖ್ಯೆ ಹೊಂದಿದ್ದು, ಈಗ ಹೊಸ ಸಂಸ್ಥೆಗೆ ಸೇರಿದರೆ ಆತನಿಗೆ ಭಾಗ ‘ಎ' ಲಾಭ ಸಿಗುವುದಿಲ್ಲ. ಆದರೆ, ಆತನನ್ನು ಕೆಲಸಕ್ಕೆ ಸೇರಿಸಿಕೊಂಡ ಹೊಸ ಸಂಸ್ಥೆಗೆ ಸರ್ಕಾರದಿಂದ ಭಾಗ ‘ಬಿ' ಅಡಿಯಲ್ಲಿ ಪೆÇ್ರೀತ್ಸಾಹ ಧನ ಸಿಗುತ್ತದೆ ಎಂದರು.

ಬಳ್ಳಾರಿ ವಲಯದಲ್ಲಿ ಇಂತಹ 248 ಉದ್ಯೋಗದಾತ ಸಂಸ್ಥೆಗಳು ಈ ಸೌಲಭ್ಯ ಪಡೆದುಕೊಂಡಿವೆ. ಕೇಂದ್ರ ಸರ್ಕಾರದ ಈ ವಿನೂತನ ಯೋಜನೆಯು ಬಳ್ಳಾರಿ ಭಾಗದ ಸಾವಿರಾರು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತ ಸಂಸ್ಥೆಗಳಿಗೆ ಆರ್ಥಿಕವಾಗಿ ದೊಡ್ಡ ಆಸರೆಯಾಗಿದೆ ಎಂದು ತಿಳಿಸಿದರು.

ಈ ವೇಳೆ ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಜಾರಿ ಅಧಿಕಾರಿ ಅಬ್ದುಲ್ ಹಫೀಜ್, ಮೇಲ್ವಿಚಾರಕ ಜಡೇಶ್ ಹಾಗೂ ಇತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande