ಜಿಲ್ಲೆಯ ಆದರ್ಶ ವಿದ್ಯಾಲಯಗಳಲ್ಲಿನ ಖಾಲಿ ಸೀಟುಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ಕೊಪ್ಪಳ, 17 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜಿಲ್ಲೆಯ ಆದರ್ಶ ವಿದ್ಯಾಲಯಗಳಲ್ಲಿ 2026-27ನೇ ಸಾಲಿನಲ್ಲಿ ಖಾಲಿ ಇರುವ 7, 8 ಮತ್ತು 9ನೇ ತರಗತಿಗಳ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 22 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ವಿದ್ಯಾರ್
ಜಿಲ್ಲೆಯ ಆದರ್ಶ ವಿದ್ಯಾಲಯಗಳಲ್ಲಿನ ಖಾಲಿ ಸೀಟುಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ


ಕೊಪ್ಪಳ, 17 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜಿಲ್ಲೆಯ ಆದರ್ಶ ವಿದ್ಯಾಲಯಗಳಲ್ಲಿ 2026-27ನೇ ಸಾಲಿನಲ್ಲಿ ಖಾಲಿ ಇರುವ 7, 8 ಮತ್ತು 9ನೇ ತರಗತಿಗಳ ಸೀಟುಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಜೂನ್ 22 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಜೂ. 28ರ ಭಾನುವಾರ ನಡೆಯಲಿದೆ. ಅರ್ಜಿಗಳನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ, ಟಣಕನಕಲ್, ತಳವಗೇರಾ ಮತ್ತು ಇಟಗಿಯಲ್ಲಿರುವ ಆದರ್ಶ ವಿದ್ಯಾಲಯಗಳಲ್ಲಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಆಯಾ ಶಾಲೆಯ ಮುಖ್ಯೋಪಾಧ್ಯಾಯರನ್ನು ಕನಕಗಿರಿಯ ಸುರೇಶ್ ಮೊ.ಸಂ: 9632737675, 8867273046, ಟಣಕನಕಲ್ ಪ್ರಕಾಶ್ ತಗಡಿನಮನಿ ಮೊ.ಸಂ: 901130717, 9916703201, ತಳವಗೇರಾ ಸಂಗಪ್ಪ ಕಿರಸೂರು ಮೊ.ಸಂ: 9008976878, 8105747111, ಇಟಗಿ ಶ್ರೀರಾಮರಡ್ಡಿ ಮೊ.ಸಂ: 9945420957, 8494858187, ಇವರನ್ನು ಸಂಪರ್ಕಿಸುವುದು ಎಂದು ಟಿ.ಬಿ.ಪಿ ಮುನಿರಾಬಾದ್ನ ಕೊಪ್ಪಳ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande