ಬೋಧನೆಯ ಜೊತೆಯಲ್ಲಿ ಸಂಸ್ಕಾರನ್ನೂ ಕಲಿಸಿ : ಇ. ತುಕಾರಾಂ
ಸಂಡೂರು, 16 ಜೂನ್ (ಹಿ.ಸ.) : ಆ್ಯಂಕರ್ : ಆಧುನಿಕ ತಂತ್ರಜ್ಞಾನ ವಿಷಯದ ಬೋಧನೆಯ ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರವನ್ನು ಬಿತ್ತಿ ಬೆಳೆಸುವ ಜವಾಬ್ದಾರಿಯನ್ನು ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ನಿರ್ವಹಿಸಬೇಕಿದೆ ಎಂದು ಸಂಸದ ಇ. ತುಕಾರಾಂ ಅವರು ತಿಳಿಸಿದ್ದಾರೆ. `ಕಲ್ಯಾಣಿ ಸ್ಟೀ
ಬೋಧನೆಯ ಜೊತೆಯಲ್ಲಿ ಸಂಸ್ಕಾರನ್ನೂ ಕಲಿಸಿ : ಇ. ತುಕಾರಾಂ


ಬೋಧನೆಯ ಜೊತೆಯಲ್ಲಿ ಸಂಸ್ಕಾರನ್ನೂ ಕಲಿಸಿ : ಇ. ತುಕಾರಾಂ


ಬೋಧನೆಯ ಜೊತೆಯಲ್ಲಿ ಸಂಸ್ಕಾರನ್ನೂ ಕಲಿಸಿ : ಇ. ತುಕಾರಾಂ


ಸಂಡೂರು, 16 ಜೂನ್ (ಹಿ.ಸ.) :

ಆ್ಯಂಕರ್ : ಆಧುನಿಕ ತಂತ್ರಜ್ಞಾನ ವಿಷಯದ ಬೋಧನೆಯ ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರವನ್ನು ಬಿತ್ತಿ ಬೆಳೆಸುವ ಜವಾಬ್ದಾರಿಯನ್ನು ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ನಿರ್ವಹಿಸಬೇಕಿದೆ ಎಂದು ಸಂಸದ ಇ. ತುಕಾರಾಂ ಅವರು ತಿಳಿಸಿದ್ದಾರೆ.

`ಕಲ್ಯಾಣಿ ಸ್ಟೀಲ್ಸ್' ಸಿಎಸ್ಆರ್ ನಿಧಿಯಿಂದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಅಳವಡಿಸಿರುವ ಸ್ಮಾರ್ಟ್ ಕ್ಲಾಸ್ ಮತ್ತು ಡಿಜಿಟಲ್ ಬೋರ್ಡ್ಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಡೂರು ವಿಧಾನ ಸಭಾ ಕ್ಷೇತ್ರದ ಸರ್ಕಾರದ 176 ಶಾಲೆಗಳ ಅಭಿವೃದ್ಧಿಗೆ ಸಂಕಲ್ಪ ತೊಡಲಾಗಿದೆ. ಈ ನಿಟ್ಟಿನಲ್ಲಿ 58 ಶಾಲೆಗಳ ಉನ್ನತೀಕರಣವು ಪೂರ್ಣಗೊಂಡಿದೆ. ಕ್ಷೇತ್ರದ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣವನ್ನು ಪಡೆಯುತ್ತಿದ್ದು, ಸ್ಪರ್ಧಾತ್ಮಕ ದಿನಗಳಲ್ಲಿ ಸಂಸ್ಕಾರ, ಸಂಸ್ಕøತಿ ಮತ್ತು ಸಂಯಮಗಳನ್ನು ಕಲಿಯಲು ವಿದ್ಯಾರ್ಥಿಗಳು ಗಮನ ನೀಡಬೇಕು ಎಂದರು.

ಯಾವುದೇ ಜನಪ್ರತಿನಿಧಿಗೆ ಐದು ವರ್ಷಗಳ ಅಧಿಕಾರಾದ ಅವಧಿಯಲ್ಲಿ ಜನಸೇವೆ ಮಾಡಲು ಸಿಗುವುದು ಕೇವಲ 750 ದಿನಗಳು. ಉಳಿದ ದಿನಗಳು ವಿವಿಧ ಚುನಾವಣೆಗಳು, ಚುನಾವಣಾ ನೀತಿ ಸಂಹಿತೆ ಹೀಗೇ ಹತ್ತಾರು ಕಾರಣಗಳಲ್ಲಿ ಕಳೆಯುತ್ತವೆ. ಕಾರಣ ನನಗೆ ಸಿಕ್ಕಿರುವ ಅಲ್ಪಾವಧಿಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಸ್ತೆ, ನೀರು, ಶಿಕ್ಷಣ, ಸಾರಿಗೆ ಮತ್ತು ವೈದ್ಯಕೀಯ ಸೌಲಭ್ಯಗಳ ಸುಧಾರಣೆಗೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಸಂಡೂರು ವಿಧಾನಸಭಾ ಕ್ಷೇತ್ರದ ಶಾಕಿ ಇ. ಅನ್ನಪೂರ್ಣ ತುಕಾರಾಂ ಅವರು ಮುಖ್ಯ ಅತಿಥಿಗಳಾಗಿ, ಶಿಸ್ತು ಮತ್ತು ನಿರಂತರ ಕಲಿಕೆಯ ಮೂಲಕ ಯಾರೇ ಆಗಲಿ ಏನನ್ನಾದರೂ ಸಾಧನೆ ಮಾಡಬಹುದು. ವಿದ್ಯಾರ್ಥಿಗಳು ಮೊಬೈಲ್ನಿಂದ ದೂರ ಉಳಿದು, ಕಲಿಕೆ, ಅರ್ಥ ಮಾಡಿಕೊಳ್ಳುವಿಕೆ, ಮನನ ಮಾಡಿಕೊಳ್ಳುವಿಕೆ ಮತ್ತು ಪರೀಕ್ಷೆಗಳನ್ನು ಎದುರಿಸಿ, ಯಶಸ್ವಿ ಆಗುವತ್ತ ಗಮನ ನೀಡಬೇಕು ಎಂದರು.

`ಕಲ್ಯಾಣಿ ಸ್ಟೀಲ್ಸ್'ನ ಅಧಿಕಾರಿಗಳು ಮತ್ತು ಸಿಬ್ಬಂದಿ, ಶ್ರೀಶೈಲೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚಿದಂಬರ್ ಎಸ್. ನಾನಾವಟೆ, ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ ಸೇರಿ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande