ಬಳ್ಳಾರಿ : ವಸತಿ ಶಾಲೆಯ ವಾರ್ಡನ್ ಬದಲಾವಣೆ, ಶಾಲೆ ಪ್ರಾರಂಭ
ಬಳ್ಳಾರಿ, 16 ಜೂನ್ (ಹಿ.ಸ.) : ಆ್ಯಂಕರ್ : ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಬಳ್ಳಾರಿ ನಗರದ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯನ್ನು ತೆರೆಯದ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಪ್ರಭಾರಿ ವಾರ್ಡನ್ ಆಗಿರುವ ಅರುಣ್ ಕುಮಾರ್ ಭೋಗಲಾರ್ ಜಿ.ಎಚ್. ಅವರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ,
ಬಳ್ಳಾರಿ : ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್ ಬದಲಾವಣೆ, ಶಾಲೆ ಪ್ರಾರಂಭ


ಬಳ್ಳಾರಿ : ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್ ಬದಲಾವಣೆ, ಶಾಲೆ ಪ್ರಾರಂಭ


ಬಳ್ಳಾರಿ : ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್ ಬದಲಾವಣೆ, ಶಾಲೆ ಪ್ರಾರಂಭ


ಬಳ್ಳಾರಿ, 16 ಜೂನ್ (ಹಿ.ಸ.) :

ಆ್ಯಂಕರ್ : ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಬಳ್ಳಾರಿ ನಗರದ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯನ್ನು ತೆರೆಯದ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಪ್ರಭಾರಿ ವಾರ್ಡನ್ ಆಗಿರುವ ಅರುಣ್ ಕುಮಾರ್ ಭೋಗಲಾರ್ ಜಿ.ಎಚ್. ಅವರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ, ಶ್ರೀಮತಿ ಕವಿತ ಅವರಿಗೆ ಶಾಲೆಯ ಸಂಪೂರ್ಣ ಉಸ್ತುವಾರಿಯನ್ನು ನೀಡಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಮಂಗಳವಾರ ಆದೇಶ ಜಾರಿ ಮಾಡಿದ್ದಾರೆ.

ಅರುಣ್ ಕುಮಾರ್ ಭೋಗಲಾರ್ ಜಿ.ಎಚ್ ಅವರು ಮೇ 29, 2026 ರಂದು ಬಳ್ಳಾರಿ ನಗರದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯನ್ನು ಶಾಲೆಯನ್ನು ಪ್ರಾರಂಭಿಸಿ, ನಂತರ ಸೂಕ್ತ ಕಾರಣ ನೀಡದೇ ಮುಚ್ಚಿದ್ದರು. ಶಾಲೆ ಮುಚ್ಚಿರುವ ಕುರಿತು ಪೋಷಕರು ಮತ್ತು ಸಾಮಾಜಿಕ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಸೋಮವಾರ ದೂರು ನೀಡಿದ್ದರು.

ತಕ್ಷಣವೇ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಬಳ್ಳಾರಿ ನಗರದ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯನ್ನು ತೆರೆಯಲು ಸೂಕ್ತ ಕ್ರಮಕೈಗೊಂಡು, ಮಂಗಳವಾರ ಶಾಲೆ ಪ್ರಾರಂಭವಾಗಿದೆ. ಅಲ್ಲದೇ, ಕರ್ತವ್ಯಲೋಪ ಎಸಗಿರುವ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಪ್ರಭಾರಿ ವಾರ್ಡನ್ ಆಗಿರುವ ಅರುಣ್ ಕುಮಾರ್ ಭೋಗಲಾರ್ ಜಿ.ಎಚ್ ಅವರಿಗೆ ನೋಟೀಸ್ ಜಾರಿ, ಈ ಹುದ್ದೆಗೆ ಶಿಕ್ಷಕಿ ಶ್ರೀಮತಿ ಕವಿತ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿ ಆದೇಶ ಜಾರಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande