
ಸಂಡೂರು, 16 ಜೂನ್ (ಹಿ.ಸ.) :
ಆ್ಯಂಕರ್ : ದೋಣಿಮಲೈ 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 10 ಎಮ್ವಿಏ ಪವರ್ ಪರಿವರ್ತಕದ ತುರ್ತು ನಿರ್ವಹಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 18 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಗಳವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಂಡೂರು ಪಟ್ಟಣದ ಸೀನ್ ಬಸಪ್ಪ ಕ್ಯಾಂಪ್, ನಂದಿಹಳ್ಳಿ, ಕಮತೂರು, ನಾರಾಯಣಪುರ, ರಣಜಿತ್ಪುರ, ಭುಜಂಗನಗರ, ದೇವಗಿರಿ ಮತ್ತು ನರಸಿಂಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಎನ್.ಜೆ.ವೈ ಮತ್ತು ಐ.ಪಿ.ಸೆಟ್ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್