ಜೂನ್ 18 ರಂದು ಕಲಾವಿದ ಮಂಜುನಾಥ್ ಗೋವಿಂದವಾಡ `ನುಡಿ ನಮನ'
ಬಳ್ಳಾರಿ, 16 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಖ್ಯಾತ ಚಿತ್ರಕಲಾವಿದ, ಅಜಾತಶತೃ, ಕರ್ನಾಟಕ ಲಲಿತಕಲಾ ಅಕಾಡಮಿಯ `ವರ್ಣಶ್ರೀ'' ಪ್ರಶಸ್ತಿ ಪುರಸ್ಕøತ ಮಂಜುನಾಥ ಗೋವಿಂದವಾಡ ಅವರ ಸ್ಮರಣಾರ್ಥ ಜೂನ್ 18ರ ಸಂಜೆ 6 ಗಂಟೆಗೆ ಕನ್ನಡ ಭವನದಲ್ಲಿ ನುಡಿ ನಮನ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅ
ಜೂನ್ 18 ರಂದು ಕಲಾವಿದ ಮಂಜುನಾಥ್ ಗೋವಿಂದವಾಡ `ನುಡಿ ನಮನ'


ಬಳ್ಳಾರಿ, 16 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಖ್ಯಾತ ಚಿತ್ರಕಲಾವಿದ, ಅಜಾತಶತೃ, ಕರ್ನಾಟಕ ಲಲಿತಕಲಾ ಅಕಾಡಮಿಯ `ವರ್ಣಶ್ರೀ' ಪ್ರಶಸ್ತಿ ಪುರಸ್ಕøತ ಮಂಜುನಾಥ ಗೋವಿಂದವಾಡ ಅವರ ಸ್ಮರಣಾರ್ಥ ಜೂನ್ 18ರ ಸಂಜೆ 6 ಗಂಟೆಗೆ ಕನ್ನಡ ಭವನದಲ್ಲಿ ನುಡಿ ನಮನ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲಾ ಘಟಕ, ಜಿಲ್ಲಾ ಕಲಾವಿದರ ಸಂಘ ಮತ್ತು ಶ್ರೀಮಂಜುನಾಥ ಗೋವಿಂದವಾಡ ಅಭಿಮಾನಿ ಬಳಗ ಜಂಟಿಯಾಗಿ ನುಡಿ ನಮನವನ್ನು ಹಮ್ಮಿಕೊಂಡಿದೆ.

ವಿವರಗಳಿಗಾಗಿ, ಡಾ. ನಿಷ್ಠಿ ರುದ್ರಪ್ಪ, ಅಧ್ಯಕ್ಷರು, ಕಸಾಪ, 93427 26398 ಗೆ ಕರೆ ಮಾಡಿರಿ. ಕಲಾವಿದ ಮಂಜುನಾಥ ಗೋವಿಂದವಾಡ ಅವರು ಸೋಮವಾರ ನಸುಕಿನಲ್ಲಿ ಮೃತಪಟ್ಟಿದ್ದನ್ನು ಸ್ಮರಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande