‘ಇನಾಂ' ರದ್ದು ಮಾಡಿ `ಪಟ್ಟಾ’ ಲಂಚ ಸ್ವೀಕಾರ ; ತಾಯಿ - ಮಗ ಬಂಧನ
ಸಿರುಗುಪ್ಪ, 16 ಜೂನ್ (ಹಿ.ಸ.) : ಆ್ಯಂಕರ್ : ಕಂದಾಯ ಪಹಣಿಯಲ್ಲಿ ‘ಇನಾಂ'' ರದ್ದು ಮಾಡಿ `ಪಟ್ಟಾ’ ಪದವನ್ನು ನಮೂದಿಸಲು ರೂಪಾಯಿ 1.10 ಲಕ್ಷವನ್ನು ಸ್ವೀಕರಿಸುತ್ತಿದ್ದಾಗ ಸಿರುಗುಪ್ಪ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಸುವರ್ಣ ಹಾಗೂ ಅವರ ಪುತ್ರ ದೀಪಕ್ ಅವರನ್ನು ಲೋಕಾಯುಕ್ತ ಪೆÇಲೀಸರು ಮಂಗಳವ
Mother and son arrested for accepting bribe by cancelling 'inam'


ಸಿರುಗುಪ್ಪ, 16 ಜೂನ್ (ಹಿ.ಸ.) :

ಆ್ಯಂಕರ್ : ಕಂದಾಯ ಪಹಣಿಯಲ್ಲಿ ‘ಇನಾಂ' ರದ್ದು ಮಾಡಿ `ಪಟ್ಟಾ’ ಪದವನ್ನು ನಮೂದಿಸಲು ರೂಪಾಯಿ 1.10 ಲಕ್ಷವನ್ನು ಸ್ವೀಕರಿಸುತ್ತಿದ್ದಾಗ ಸಿರುಗುಪ್ಪ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಸುವರ್ಣ ಹಾಗೂ ಅವರ ಪುತ್ರ ದೀಪಕ್ ಅವರನ್ನು ಲೋಕಾಯುಕ್ತ ಪೆÇಲೀಸರು ಮಂಗಳವಾರ ಸಂಜೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಸಿರುಗುಪ್ಪ ತಾಲೂಕಿನ ಬೈರಾಪುರ ಗ್ರಾಮದ ಗೋವಿಂದ ಕೆ. ಅವರು ಅದೇ ಗ್ರಾಮದ ಸರ್ವೆ ನಂ.57/1ಡಿ, 7 ಎಕರೆ 68 ಸೆಂಟ್ಸ್ ಜಮೀನಿನ ಪಹಣಿಯಲ್ಲಿದ್ದ `ಇನಾಂ' ಪದವನ್ನು ತೆಗೆದು `ಪಟ್ಟಾ' ಎಂದು ನಮೂದಿಸಲು ಸುವರ್ಣ ಅವರು ರುಪಾಯಿ 1.60ಸಾವಿರಕ್ಕೆ ಬೇಡಿಕೆ ಇರಿಸಿದ್ದರು. ಆದರೆ, ಕೊನೆಗೆ ರೂಪಾಯಿ 1 ಲಕ್ಷ 10 ಸಾವಿರ ರೂಪಾಯಿ ಹಣ ನೀಡಲು ಒಪ್ಪಿಗೆ ನೀಡಿದ್ದರು.

ಗೋವಿಂದ ಕೆ. ಅವರು ಮಂಗಳವಾರ ಸಂಜೆ 4.15ರ ಸುಮಾರಿಗೆ ನೇತಾಜಿ ಕಾಂಪ್ಲೆಕ್ಸ್ ಎದುರು, ಲಂಚದ ಹಣ ರೂಪಾಯಿ 1.10 ಲಕ್ಷವನ್ನು ಸುವರ್ಣ ಅವರ ಮಗ ದೀಪಕ್ಗೆ ನೀಡುತ್ತಿದ್ದಾಗ ಲೋಕಾಯುಕ್ತರು ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದು, ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande