ಕುಡತಿನಿ `ಭೂ ಸಂತ್ರಸ್ತರ ಹೋರಾಟ, ಗುರುವಾರ `ಬಳ್ಳಾರಿ ಬಂದ್'
ಬಳ್ಳಾರಿ, 16 ಜೂನ್ (ಹಿ.ಸ.) : ಆ್ಯಂಕರ್ : ಕೈಗಾರಿಕೆಗಳ ಪ್ರಾರಂಭ ಮತ್ತು ನ್ಯಾಯಯುತವಾದ ಪರಿಹಾರಕ್ಕೆ ಆಗ್ರಹಿಸಿ 1270 ದಿನಗಳಿಂದ ಕುಡತಿನಿಯಲ್ಲಿ `ಭೂ ಸಂತ್ರಸ್ತರ ಹೋರಾಟ ಸಮಿತಿ''ಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರು ಜೂನ್ 18ರ ಗುರುವಾರ ಕರೆ ನೀಡಿರುವ `ಬಳ್ಳಾರಿ ಬಂದ್''ಗೆ ವಿವಿಧ
ಜೂನ್ 18ರ `ಬಳ್ಳಾರಿ ಬಂದ್' : ಬೆಂಬಲ ಕೋರಿಕೆ


ಜೂನ್ 18ರ `ಬಳ್ಳಾರಿ ಬಂದ್' : ಬೆಂಬಲ ಕೋರಿಕೆ


ಬಳ್ಳಾರಿ, 16 ಜೂನ್ (ಹಿ.ಸ.) :

ಆ್ಯಂಕರ್ : ಕೈಗಾರಿಕೆಗಳ ಪ್ರಾರಂಭ ಮತ್ತು ನ್ಯಾಯಯುತವಾದ ಪರಿಹಾರಕ್ಕೆ ಆಗ್ರಹಿಸಿ 1270 ದಿನಗಳಿಂದ ಕುಡತಿನಿಯಲ್ಲಿ `ಭೂ ಸಂತ್ರಸ್ತರ ಹೋರಾಟ ಸಮಿತಿ'ಯ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರು ಜೂನ್ 18ರ ಗುರುವಾರ ಕರೆ ನೀಡಿರುವ `ಬಳ್ಳಾರಿ ಬಂದ್'ಗೆ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಜನಸಾಮಾನ್ಯರು ಮತ್ತು ಗಣ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ.

ಕುಡತಿನಿಯ `ಭೂ ಸಂತ್ರಸ್ತರ ಹೋರಾಟ ಸಮಿತಿ'ಯು ಕರ್ನಾಟಕ ಪ್ರಾಂತ ರೈತ ಸಂಘ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲವನ್ನು ಪಡೆದಿವೆ. ಆದರೂ, ಕರ್ನಾಟಕ ಸರ್ಕಾರದ ಗಮನವನ್ನು ಸೆಳೆಯುವಲ್ಲಿ ಮಿಶ್ರಫಲವನ್ನು ಪಡೆದಿವೆ. ಈ ಹಿನ್ನಲೆಯಲ್ಲಿ ಜೂನ್ 18 ರಂದು `ಬಳ್ಳಾರಿ ಬಂದ್' ಯಶಸ್ವಿಗೊಳಿಸಿ, ಸರ್ಕಾರದ ಗಮನ ಸೆಳೆಯಬೇಕು ಎನ್ನುವ ವಿಚಾರದಿಂದ ಬಳ್ಳಾರಿ ನಗರದ ವಿವಿಧ ಸಂಘ ಸಂಸ್ಥೆಗಳು, ಗಣ್ಯರು, ವರ್ತಕರು, ರೈತರು, ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಹೀಗೇ ಸಮಾಜದಲ್ಲಿರುವ ಪ್ರತಿಯೊಬ್ಬರನ್ನೂ ಭೇಟಿ ಮಡಿ, ಸಹಕಾರ ಹಾಗೂ ಬೆಂಬಲ ಕೋರುತ್ತಿದೆ.

ಕೈಗಾರಿಕೆಗಳ ಪ್ರಾರಂಭ ಮತ್ತು ನ್ಯಾಯಯುತವಾದ ಪರಿಹಾರಕ್ಕೆ ಆಗ್ರಹಿಸಿ 1275 ದಿನಗಳಿಂದ `ಭೂ ಸಂತ್ರಸ್ತರ ಹೋರಾಟ ಸಮಿತಿ'ಯ ನೇತೃತ್ವದಲ್ಲಿ ಕುಡತಿನಿ, ವೇಣಿವೀರಾಪುರ, ಹರಗಿನಡೋಣಿ, ಸಿದ್ದಮ್ಮನಹಳ್ಳಿ, ಸೇರಿ ಭೂ ಸಂತ್ರಸ್ತರ ಪ್ರತಿಭಟನೆಯು ಕುಡತಿನಿಯಲ್ಲಿ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande