
ಕೋಲಾರ, ೧೬ ಜೂನ್ (ಹಿ.ಸ) :
ಆ್ಯಂಕರ್ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ ಸಹಿತ ಸಾಲ ಸೌಲಭ್ಯ ನೀಡುತ್ತಿದ್ದು, ಇದರ ಪ್ರಯೋಜನ ಪಡೆದು ಸ್ವಾವಲಂಬಿಗಳಾಗಿ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ಕರೆ ನೀಡಿದರು.
ಈಗಾಗಲೇ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಪಡೆದಿರುವವರ ಮನೆಗಳಿಗೆ ಭೇಟಿ ನೀಡಿದ ನಂತರ ಅಂತರಗ0ಗೆ ರಸ್ತೆಯ ಉದ್ಯೋಗ ವಿನಿಯಮ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.
ನಿಗಮದಿಂದ ವಿವಿಧ ಸ್ವಾವಲಂಬಿ ವೃತ್ತಿಗಳಾದ ವೃತ್ತಿಗಳಾದ ಹಸು ಸಾಗಕಾಣಿಕೆ, ವ್ಯಾಪಾರ ಚಟುವಟಿಕೆ, ವಿವಿಧ ಸೇವಾ ವಲಯಗಳ ಚಟುವಟಿಕೆ, ಕೈಗಾರಿಕಾ ಚಟುವಟಿಕೆ, ಆಹಾರ ತಯಾರಿಕೆ ಹಾಗೂ ವಿತರಣೆ ಇತ್ಯಾದಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಸಹಿತ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದೆ.ಈ ಯೋಜನೆಯ ಸದುಪಯೋಗವನ್ನು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯವರು ಬಳಸಿಕೊಂಡು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದುವ0ತೆ ತಿಳಿಸಿದ ಅವರು, ಈ ಯೋಜನೆಯಡಿ ಗರಿಷ್ಟ ಎರಡು ಲಕ್ಷದವರೆಗೂ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಈ ಮೊತ್ತದಲ್ಲಿ ಶೇಕಡ ೨೦% ರಷ್ಟು ಅಂದರೆ ಗರಿಷ್ಟ ರೂ.೪೦,೦೦೦/-ಗಳ ಸಹಾಯಧನ ಹಾಗೂ ಉಳಿಕೆ ಮೊತ್ತವಾದ ಶೇ.೮೦ರಷ್ಟು ಅಂದರೆ ಗರಿಷ್ಟ ರೂ.೧,೬೦,೦೦೦/-ಗಳ ಸಾಲವನ್ನು ವಾರ್ಷಿಕ ಶೇ.೪ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಈ ಯೋಜನೆಗೆ ಅರ್ಹರಾಗಲು ಅರ್ಜಿದಾರರ ಕುಟುಂಬದ ವಾರ್ಷಿಕವರಮಾನ ೮ ಲಕ್ಷ ಮೀರದಂತೆ ಇರಬೇಕು ಹಾಗೂ ಸರ್ಕಾರ ದಿಂದ ನೀಡಲಾಗುವ ಇಡಬ್ಲೂಎಸ್ ಪ್ರಮಾಣ ಪತ್ರ ಹೊಂದಿರಬೇಕು ಎಂದು ತಿಳಿಸಿದರು. ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿದ್ದು, ೧೮ ರಿಂದ ೬೫ ವರ್ಷ ವಯೋಮಿತಿ ಒಳಗಿರಬೇಕು ಮತ್ತು ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
ಅರ್ಜಿದಾರರ ಆಧಾರ ಸಂಖ್ಯೆಯ ಬ್ಯಾಂಕ್ ಖಾತೆಗೆ ಸೀಡಿಂಗ್ ಆಗಿರಬೇಕು ಹಾಗೂ ಎಲ್ಲಾ ಸಾಲ-ಸಹಾಯಧನವನ್ನು ನೇರ ನಗದು ವರ್ಗಾವಣೆ ಮುಖಾಂತರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಸಾಲವನ್ನು ೩ ವರ್ಷಗಳ ಒಳಗಿನ ಅವಧಿಯಲ್ಲಿ ಅಂದರೆ, ೩೪ ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿ ಸೇರಿಸಿ ಮರುಪಾವತಿಸಬೇಕು ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಸದರಿ ಯೋಜನೆಯಡಿ ಸಾಲವನ್ನು ಪಡೆದು ವಿವಿಧ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಫಲಾನುಭವಿಗಳ ಕಾರ್ಯನಿರ್ವಹಣಾ ಕ್ಷೇತ್ರಕ್ಕೆ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಸಮುದಾಯದ ಮುಖಂಡರೊAದಿಗೆ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಯೋಜನೆಯಿಂದ ಉಂಟಾಗಿರುವ ಆರ್ಥಿಕ ಲಾಭದ ಮಾಹಿತಿ ಪಡೆದು ಹಾಗೂ ಯೋಜನೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ಮುಂದುವರೆಸಲು ಸಲಹೆಗಳನ್ನು ನೀಡಿ, ಫಲಾನುಭವಿಗಳು ನಿಗದಿತ ಕಾಲಾವಧಿಯಲ್ಲಿ ಸಾಲವನ್ನು ಮಂಡಳಿಗೆ ಮರುಪಾವತಿ ಮಾಡುವಂತೆ ಸೂಚಿಸಿದರು.
ಕೋಲಾರ ನಗರದಲ್ಲಿ ಡಿ.ಟಿ.ಪಿ ಸೆಂಟರ್ ಪ್ರಾರಂಭಿಸಲು ಆರ್ಥಿಕ ನೆರವು ಪಡೆದ ಶ್ರೇಯಸ್, ನೃತ್ಯ ತರಬೇತಿ ಶಾಲೆ ಪ್ರಾರಂಭಿಸಲು ನೆರವು ಪಡೆದ ಡಿ.ಎನ್.ಸುರಕ್ಷಾ ದಿಕ್ಷೀತ್, ಮಹಿಳೆಯರ ಬ್ಯೂಟಿ ಪಾರ್ಲರ್ ಹಾಗೂ ವಿವಿಧ ಆಹಾರ ಉತ್ವನ್ನಗಳ ತಯಾರಿಕಾ ಘಟಕವನ್ನು ನಡೆಸುತ್ತಿರುವ ಚಂದ್ರಶೇಖರ್ ಕೆ, ರವರ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಆರ್ಥಿಕ ನೆರವಿನಿಂದ ಉಂಟಾಗಿರುವ ಅನುಕೂಲತೆಗಳ ಬಗ್ಗೆ ಮಾಹಿತಿ ಪಡೆದು ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಸಲಹೆ ನೀಡಿದರು.
ನಂತರ ಬಂಗಾರಪೇಟೆ ನಗರದಲ್ಲಿ ವಿವಿಧ ಮಸಾಲೆ ಪರ್ದಾಥಗಳು ಹಾಗೂ ತಿಂಡಿ ತಿನಿಸುಗಳ ತಯಾರಿಕಾ ಘಟಕ ನಡೆಸುತ್ತಿರುವ ಅಶ್ವಿನಿ ಎಸ್, ಕೇಟರಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಸುಷ್ಮಾ ಜಿ.ಎಸ್ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರಕ್ಷಾ ಎನ್, ಕಾಂಡಿಮೆ0ಟ್ಸ್ ಸ್ಟೋರ್ ನಡೆಸುತ್ತಿರುವ ದಿನೇಶ್ ಎಸ್, ರವರ ಕಾರ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಯೋಜನೆಯಿಂದ ಪಡೆಯುತ್ತಿರುವ ಆರ್ಥಿಕ ಲಾಭಗಳ ಬಗ್ಗೆ ಚರ್ಚಿಸಿ ಸಾಲವನ್ನು ಸಕಾ¯ದಲ್ಲಿ ಮರುಪಾವತಿ ಮಾಡಿ ಯೋಜನೆಯು ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ತಲುಪಲು ನೆರವು ನೀಡುವಂತೆ ಕೋರಿದರು.
ಜಿಲ್ಲೆಯಲ್ಲಿ ಯೋಜನೆಯು ಯಶಸ್ವಿಯಾಗಿ ಕಾರ್ಯಗತಗೊಳ್ಳಲು ಸಹಕಾರ ನೀಡುತ್ತಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಕೆ.ಶ್ರೀನಿವಾಸ್ ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ಯೋಜನೆಯು ಸಮುದಾಯದ ಅರ್ಹ ಫಲಾನುಭವಿಗಳಿಗೆ ತಲುಪಲು ನೆರವು ನೀಡುತ್ತಿರುವ ಸಮುದಾಯದ ಮುಖಂಡರ ಕಾರ್ಯವನ್ನು ಶ್ಲಾಘಿಸಿದರು. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಆರ್ಥಿಕ ನೆರವನ್ನು ನೀಡಲು ಉದ್ದೇಶಿಸಿರುವುದಾಗಿ ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ಶ್ರೀನಿವಾಸ್ ಅಧ್ಯಕ್ಷರಿಗೆ ಕೋಲಾರ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳು, ಅರ್ಹರಾದ ಫಲಾನುಭವಿಗಳು, ಫಲಾನುಭವಿಗಳು ಪ್ರಾರಂಭಿಸಿರುವ ವಿವಿಧ ಸ್ವಂತ ಉದ್ಯಮಗಳು ಸಾಲ ಮರುಪಾವತಿ ಮಾಡಿರುವ ಫಲಾನುಭವಿಗಳ ಮಾಹಿತಿಯನ್ನು ನೀಡಿ ಮುಂದಿನ ದಿನಗಳಲ್ಲಿ ಮಂಡಳಿ ವತಿಯಿಂದ ಸಮುದಾಯದ ಅಭಿವೃದ್ದಿಗೆ ಹಲವಾರು ಅಗತ್ಯವಾದ ಯೋಜನೆಗಳನ್ನು ಜಾರಿಗೊಳಿಸುವಂತೆ ಕೋರಿದರು.
ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ವಿ.ಎಸ್.ಆನಂದಮೂರ್ತಿ, ಜಿಲ್ಲಾ ಬ್ರಾಹ್ಮಣ ಸಂಘದ ಪ್ರತಿನಿಧಿಗಳಾದ ಚಂದ್ರಶೇಖರ್ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯ ಸಿಬ್ಬಂದಿಗಳಾದ ವೆಂಕಟರತ್ನ, ಶ್ವೇತಾ, ಮನೋಜ್, ವಿರೇಂದ್ರಚಾರಿ ಮುಂತಾದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್