

ಕೊಪ್ಪಳ, 16 ಜೂನ್ (ಹಿ.ಸ.) :
ಆ್ಯಂಕರ್ : ಬಲ್ಡೋಟ ವಶಪಡಿಸಿಕೊಂಡ ಬಸಾಪುರ ಕೆರೆ ಹೋರಾಟ 43ನೇ ದಿನದಲ್ಲಿ ಮುಂದುವರೆಯಿತು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೆನ ಕಲಿಕೇರಿ ಮಾತನಾಡಿ, ಜು 21ರಂದು ನರಗುಂದ ರೈತ ಬಂಡಾಯ ದಿನ. ಅಷ್ಟರೊಳಗಾಗಿ ಜಿಲ್ಲಾಧಿಕಾರಿಗಳು ಕೆರೆಯನ್ನು ಸುತ್ತಲಿನ ಗ್ರಾಮದ ರೈತರ ಬಳಕೆಗೆ ಮುಕ್ತ ಮಾಡಬೇಕು. ಸಕಾಲಕ್ಕೆ ಮುಂಗಾರು ಮಳೆ ಬೀಳದೆ ನೀರಿನ ಆಹಾಕಾರ ಹೆಚ್ಚಾಗಿದೆ.
ಸಾವಿರಾರು ಹಸುಗಳು ನೀರು ಎಲ್ಲಿ ಕುಡಿಸಬೇಕು ಎಂದು ತೋಚದೆ ರೈತರು ಕಂಗಾಲಾಗಿದ್ದಾರೆ. ಜಿಲ್ಲಾಧಿಕಾರಿಗಳಿಂದ ಶೀಘ್ರ ಕ್ರಮಕ್ಕಾಗಿ ಕಾಯುತ್ತಿದ್ದೇವೆ. ಅವರು ಒಂದು ವೇಳೆ ಕೆರೆ ವಶಕ್ಕೆ ಪಡೆಯುವಲ್ಲಿ ವಿಫಲರಾದರೆ ರಾಜ್ಯ ಮಟ್ಟದ ಚಳವಳಿಗೆ ಕರೆ ಕೊಂಡು ಬಂಡಾಯ ಮಾಡಿಯಾದರೂ ಕೆರೆ ವಶಪಡಿಸಿಕೊಳ್ಳುತ್ತೇವೆ ಎಂದರು. ನೂರಂದಪ್ಪ ವಿ. ಉಪ್ಪಿನ ಅವರು 50 ಊಟದ ತಟ್ಟೆಗಳನ್ನು ದೇಣಿಗೆಯಾಗಿ ಕೊಟ್ಟು ಹೋರಾಟ ಜಯ ಸಾಧಿಸಲಿ ಎಂದು ಹಾರೈಸಿದರು.
ಪ್ರತಿಭಟನೆಯಲ್ಲಿ ಕನಕಪ್ಪ ಪೂಜಾರ ಇಂದರಗಿ, ರಾಮಣ್ಣ ಮಲಬಾರಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಯಂಕಪ್ಪ ಬಿಸರಳ್ಳಿ ಕಾಸನಕಂಡಿ, ನಾಗಪ್ಪ ಜಿ. ಕಿನ್ನಾಳ, ನಾಗರಾಜ ಎಲಿಗಾರ, ನಿಂಗಪ್ಪ ಕಾಟ್ರಳ್ಳಿ, ಈಶ್ವರಪ್ಪ ಕೂಕನಪಳ್ಳಿ, ಹನುಮಂತಪ್ಪ ಚಿಂಚಲಿ, ನಾಗಪ್ಪ ಅಚಲಾಪುರ, ರಾಮಣ್ಣ ಇನ್ನೂ ಅನೇಕ ಜನ, ರೈತ ಸಂಘದ ಕಾರ್ಯಕರ್ತರು ಪಾಲ್ಗೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್