ಎಸ್ಐಆರ್ ರದ್ದುಪಡಿಸುವಂತೆ ಒತ್ತಾಯಿಸಿ ಕೋಲಾರದಲ್ಲಿ ಜಾಗೃತಿ ಜಾಥಾ
ಎಸ್ಐಆರ್ ರದ್ದುಪಡಿಸುವಂತೆ ಒತ್ತಾಯಿಸಿ ಕೋಲಾರದಲ್ಲಿ ಜಾಗೃತಿ ಜಾಥಾ
ರಾಜ್ಯವ್ಯಾಪಿ ಎಸ್.ಐಆರ್ ಯೋಜನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಬಂಗಾರಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.


ಕೋಲಾರ, ೧೬ ಜೂನ್ (ಹಿ.ಸ) :

ಆ್ಯಂಕರ್ : ರಾಜ್ಯವ್ಯಾಪಿ ಎಸ್ಐಆರ್ ಯೋಜನೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿರುವ ಐದು ಮಾರ್ಗಗಳ ಬೃಹತ್ ಜನಜಾಗೃತಿ ಜಾಥಾವು ಜೂನ್ ೧೬ ರಂದು ಕೋಲಾರ ಜಿಲ್ಲೆಯನ್ನು ಪ್ರವೇಶಿಸಲಿದೆ. ಜೂನ್ ೧೩ ರಂದು ತುಮಕೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಈ ಮಹತ್ವದ ಜಾಥಾಕ್ಕೆ ಅಧಿಕೃತ ಚಾಲನೆ ನೀಡಲಾಗಿತ್ತು.

'ಎದ್ದೇಳು ಕರ್ನಾಟಕ' ರಾಜ್ಯ ಸಂಘಟನಾ ಸಂಚಾಲಕ ಕುಮಾರ್ ಸಮತಳ, ಇಂದ್ರಮ್ಮ, ರಾಮಕೃಷ್ಣ, ದೊಡ್ಡಬಳ್ಳಾಪುರ ರಮೇಶ್ ಸಂಕ್ರಾAತಿ ಹಾಗೂ ಕೋಲಾರ ಜಿಲ್ಲೆಯ ಕಿತ್ತಂಡೂರು ವೆಂಕಟರಾಮ್ ಸೇರಿದಂತೆ ಹಲವು ಪ್ರಮುಖರು ಈ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದರು. ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲಕ ಹಾದುಬರುವ ಈ ಜಾಥಾವು ಮಂಗಳವಾರ ಕೋಲಾರ ನಗರಕ್ಕೆ ತಲುಪಲಿದೆ.

ನಗರದ ಪ್ರಮುಖ ಕೇಂದ್ರಗಳಾದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಮೆಕ್ಕೆ ಸರ್ಕಲ್, ಟವರ್ ವೃತ್ತ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ಸೇರಿದಂತೆ ವಿವಿಧ ವೃತ್ತಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಈ ಜಾಥಾದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಜಾತ್ಯಾತೀತ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಪರವಾಗಿ ಕಲಾವಿದ ಬಂಗಾರಪೇಟೆ ಯಲ್ಲಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಜಾಥಾವು ಎಸ್ಐಆರ್ ಯೋಜನೆಯಿಂದ ಜನಸಾಮಾನ್ಯರಿಗಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande