ಟಣಕನಕಲ್ : ಆದರ್ಶ ವಿದ್ಯಾಲಯದ ಖಾಲಿ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ
ಕೊಪ್ಪಳ, 16 ಜೂನ್ (ಹಿ.ಸ.) : ಆ್ಯಂಕರ್ : ಟಣಕನಕಲ್ ಸರಕಾರಿ ಆದರ್ಶ ವಿದ್ಯಾಲಯದ 7, 8 ಮತ್ತು 9ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಪ್ರವೇಶ ಪರೀಕ್ಷೆ ಮೂಲಕ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಟಣಕನಲ್ ಸರಕಾರಿ ಆದರ್ಶ ವಿದ್ಯಾಲಯದ 7ನೇ ತರಗತಿಯಲ್ಲಿ 17 ಸೀಟುಗಳು, 8ನೇ ತರಗತಿಯಲ್ಲಿ 9 ಸೀಟು
ಟಣಕನಕಲ್ : ಆದರ್ಶ ವಿದ್ಯಾಲಯದ ಖಾಲಿ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನ


ಕೊಪ್ಪಳ, 16 ಜೂನ್ (ಹಿ.ಸ.) :

ಆ್ಯಂಕರ್ : ಟಣಕನಕಲ್ ಸರಕಾರಿ ಆದರ್ಶ ವಿದ್ಯಾಲಯದ 7, 8 ಮತ್ತು 9ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಪ್ರವೇಶ ಪರೀಕ್ಷೆ ಮೂಲಕ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಟಣಕನಲ್ ಸರಕಾರಿ ಆದರ್ಶ ವಿದ್ಯಾಲಯದ 7ನೇ ತರಗತಿಯಲ್ಲಿ 17 ಸೀಟುಗಳು, 8ನೇ ತರಗತಿಯಲ್ಲಿ 9 ಸೀಟು ಹಾಗೂ 9ನೇ ತರಗತಿಯಲ್ಲಿ 7 ಸೇರಿ ವಿವಿಧ ಸಾಮಾಜಿಕ ವರ್ಗಗಳ ಮೀಸಲಾತಿವಾರು ಸೀಟುಗಳು ಖಾಲಿ ಇರುತ್ತವೆ. ಈ ಖಾಲಿ ಇರುವ ಸೀಟುಗಳನ್ನು ಕರ್ನಾಟಕ ಮೀಸಲಾತಿಯನ್ವಯ ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಪರೀಕ್ಷೆಯು ವಸ್ತು ನಿಷ್ಠ ಮಾದರಿಯ 100 ಅಂಕಗಳಿಗೆ ನಡೆಯಲಿದ್ದು, ಅರ್ಜಿ ನಮೂನೆಯನ್ನು ಆದರ್ಶ ವಿದ್ಯಾಲಯ ಟಣಕನಕಲ್ ಇಲ್ಲಿಂದ ಪಡೆದು ಭರ್ತಿಮಾಡಿದ ಅರ್ಜಿಗಳನ್ನು ಜೂನ್ 22 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯ ಟಣಕನಕಲ್ ಮುಖ್ಯೋಪಾಧ್ಯಾಯರು ಮೊಬೈಲ್ ಸಂಖ್ಯೆ: 9901130717 ಹಾಗೂ 9916703201 ಗೆ ಸಂಪರ್ಕಿಸುವoತೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande