ಮತದಾರರ ಪಟ್ಟಿ ಪರಿಷ್ಕರಣೆ `ತುಕಡೆ' ಗ್ಯಾಂಗ್ ವಿವಾದ : ಸಿ.ಟಿ. ರವಿ
ಬಳ್ಳಾರಿ, 15 ಜೂನ್ (ಹಿ.ಸ.) : ಆ್ಯಂಕರ್ : ಭಾರತದಲ್ಲಿ 1952 ರಿಂದಲೂ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದ್ದರೂ ಈ ಬಾರಿಯ ವಿಶೇಷ ಪರಿಷ್ಕರಣೆ ಕುರಿತು `ತುಕಡೆ'' ಗ್ಯಾಂಗ್ ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ. ಜಿಲ್ಲಾ ಬಿಜ
ಮತದಾರರ ಪಟ್ಟಿ ಪರಿಷ್ಕರಣೆ `ತುಕಡೆ' ಗ್ಯಾಂಗ್ನ ವಿವಾದ  ; ಸಿ.ಟಿ. ರವಿ


ಬಳ್ಳಾರಿ, 15 ಜೂನ್ (ಹಿ.ಸ.) :

ಆ್ಯಂಕರ್ : ಭಾರತದಲ್ಲಿ 1952 ರಿಂದಲೂ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತಿದ್ದರೂ ಈ ಬಾರಿಯ ವಿಶೇಷ ಪರಿಷ್ಕರಣೆ ಕುರಿತು `ತುಕಡೆ' ಗ್ಯಾಂಗ್ ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, `ತುಕಡೆ' ಗ್ಯಾಂಗ್ ಕೇಂದ್ರ ಸರ್ಕಾರ ಮತ್ತು ಬಿಜೆಪಿಯ ವಿರುದ್ಧ ನಿರಂತರವಾಗಿ ವಿವಾದಗಳನ್ನು ಸೃಷ್ಠಿಸುತ್ತಲೇ ಇದೆ. ಆದರೆ, ಎಲ್ಲಾ ವಿವಾದಗಳು ಬಿಜೆಪಿಗೆ ಅನುಕೂಲವಾಗಲಿವೆ. ಮತದಾರರ ಪಟ್ಟಿಯ ಪರಿಷ್ಕರಣೆಯು 1952 ರಿಂದಲೂ ದೇಶದಲ್ಲಿ ನಡೆದಿದೆ. ವಿನಾಕಾರಣ ಈ ಕುರಿತು ವಿವಾದ ನಡೆದಿದೆ ಎಂದರು.

ವಿದೇಶಗಳಲ್ಲಿ ಇರುವ ಭಾರತ ವಿರೋಧಿಗಳು ನಿಗೂಢವಾಗಿ ಹತ್ಯೆ ಆಗುತ್ತಿರುವುದರ ಹಿಂದೆ `ಚಾಣಕ್ಯ' ನೀತಿ ಅಡಗಿದೆ. ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತದಲ್ಲಿ ಭಯೋತ್ಪಾದಕರಿಗೆ `ಬಿರಿಯಾನಿ' ನೀಡುತ್ತಿಲ್ಲ, ಅವರನ್ನು `ಬ್ರದರ್ಸ್' ಎನ್ನುತ್ತಿಲ್ಲ. ಭಾರತವೀಗ ಭಯೋತ್ಪಾದನೆ ಮುಕ್ತ ದೇಶವಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು `ಭ್ರಷ್ಟಾಚಾರ ಮುಕ್ತ' ಆಡಳಿತಕ್ಕೆ ಒತ್ತು ನೀಡಿದ್ದು ಸರಿಯೇ. ಆದರೆ, ಮುಖ್ಯಮಂತ್ರಿಗಳ ಕಚೇರಿಯೇ ಭ್ರಷ್ಟಾಚಾರ ಕೇಂದ್ರವಾದಲ್ಲಿ, ಮುಖ್ಯಮಂತ್ರಿಗಳೇ ಭ್ರಷ್ಟಾಚಾರದ ಕಿಂಗ್ ಆದರೆ ಹೇಗೆ? ಡಿ.ಕೆ. ಶಿವಕುಮಾರ್ ಅವರು ಉತ್ತಮವಾದ ಜನಪರವಾದ ಆಡಳಿತ ನೀಡಲಿ ಎನ್ನುವುದು ರಾಜ್ಯದ ನಿರೀಕ್ಷೆಯಾಗಿದ್ದು, ಅವರು ಉತ್ತಮ ಆಡಳಿತ ನೀಡಲಿ ಎಂದರು.

ವಿಧಾನ ಪರಿಷತ್ ಸದಸ್ಯರಾದ ವೈ.ಎಂ. ಸತೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಅನಿಲ್ ನಾಯ್ಡು ಮೋಕ ಹಾಗೂ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande