ಮನೆಯ ಬೋರ್ವೆಲ್ ಹೋಲ್ನಲ್ಲಿ ಅಡಗಿದ್ದ ನಾಗರಹಾವು ರಕ್ಷಣೆ
ಬಾಗಲಕೋಟೆ, 15 ಜೂನ್ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ವಾರ್ಡ್ ನಂ.14ರ ಲಕ್ಮಿಗುಡಿ ಪ್ರದೇಶದ ಬಿದರಿಯವರ ಮನೆಯಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ನಾಗರಹಾವನ್ನು ಉರಗ ರಕ್ಷಕರು ಸುರಕ್ಷಿತವಾಗಿ ರಕ್ಷಿಸಿ ಕಾಡಿನ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಮನೆಯ ಬೋರ್ವೆಲ್ ಹೋಲ್ನಲ್ಲಿ
ಹಾವು


ಬಾಗಲಕೋಟೆ, 15 ಜೂನ್ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ವಾರ್ಡ್ ನಂ.14ರ ಲಕ್ಮಿಗುಡಿ ಪ್ರದೇಶದ ಬಿದರಿಯವರ ಮನೆಯಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ನಾಗರಹಾವನ್ನು ಉರಗ ರಕ್ಷಕರು ಸುರಕ್ಷಿತವಾಗಿ ರಕ್ಷಿಸಿ ಕಾಡಿನ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ.

ಮನೆಯ ಬೋರ್ವೆಲ್ ಹೋಲ್ನಲ್ಲಿ ಅಡಗಿದ್ದ ನಾಗರಹಾವನ್ನು ಕಂಡು ಮನೆಯವರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ಬೃಹತ್ ಗಾತ್ರದ ಹಾವು ಮನೆಯ ಆವರಣದಲ್ಲಿ ಕಾಣಿಸಿಕೊಂಡಿದ್ದರಿಂದ ಕುಟುಂಬ ಸದಸ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳೀಯ ಉರಗ ರಕ್ಷಕ ಹುಸೇನ ಮದಾರಿ ಅವರಿಗೆ ಮಾಹಿತಿ ನೀಡಲಾಯಿತು.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಹುಸೇನ ಮದಾರಿ ಅವರು ಸಾಕಷ್ಟು ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಬೋರ್ವೆಲ್ ಹೋಲ್ನಲ್ಲಿ ಅಡಗಿದ್ದ ನಾಗರಹಾವನ್ನು ಸೆರೆಹಿಡಿದರು. ಬಳಿಕ ಹಾವನ್ನು ಸುರಕ್ಷಿತವಾಗಿ ನೀರಿನ ಕ್ಯಾನಿನಲ್ಲಿ ಇರಿಸಿ ಯಾವುದೇ ತೊಂದರೆಯಾಗದಂತೆ ಸೂಕ್ತ ಸ್ಥಳಕ್ಕೆ ಕೊಂಡೊಯ್ದರು.

ಉರಗ ರಕ್ಷಕರ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಸಂಭವಿಸಬಹುದಾದ ಅಪಾಯ ತಪ್ಪಿದ್ದು, ಮನೆಯವರು ಹಾಗೂ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನಾಗರಹಾವು ಸೇರಿದಂತೆ ಯಾವುದೇ ವಿಷಕಾರಿ ಹಾವುಗಳು ಕಂಡುಬಂದಲ್ಲಿ ಅವುಗಳನ್ನು ಕೊಲ್ಲದೆ, ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಿ ಸುರಕ್ಷಿತವಾಗಿ ರಕ್ಷಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande