ಕುಳಲಿಯಲ್ಲಿ ಅರಿಶಿನ ಕೃಷಿಗೆ ಹೊಸ ಪ್ರಯೋಗ ; ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ನಾಟಿ ಪ್ರಾತ್ಯಕ್ಷಿಕೆ
ಬಾಗಲಕೋಟೆ, 15 ಜೂನ್ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಅರಿಶಿನ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ವತಿಯಿಂದ ಪ್ರಾಯೋಗಿಕ ಅರಿಶಿನ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಕುಳಲಿ
ಅರಿಶಿಣ


ಬಾಗಲಕೋಟೆ, 15 ಜೂನ್ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ ಅರಿಶಿನ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ವತಿಯಿಂದ ಪ್ರಾಯೋಗಿಕ ಅರಿಶಿನ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.

ಕುಳಲಿ ಗ್ರಾಮದ ಪ್ರಗತಿಪರ ರೈತ ಶಿವಾನಂದ ಗಣಿಯವರ ಜಮೀನಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಧುನಿಕ ಕೃಷಿ ಪದ್ಧತಿ, ಅರಿಶಿನ ಬೆಳೆಯ ವೈಜ್ಞಾನಿಕ ನಾಟಿ ವಿಧಾನ ಹಾಗೂ ಉತ್ತಮ ಇಳುವರಿ ಪಡೆಯುವ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ತೋಟಗಾರಿಕೆ ಇಲಾಖೆ ತಾಲೂಕು ಅಧಿಕಾರಿ ಅಭಯಕುಮಾರ ಮೊರಬ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಅರಿಶಿನ ಬೆಳೆಯ ಮಹತ್ವ, ಮಾರುಕಟ್ಟೆ ಅವಕಾಶಗಳು ಹಾಗೂ ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯದ ಕುರಿತು ವಿವರಿಸಿದರು.

ಪ್ರಾತ್ಯಕ್ಷಿಕೆಯಲ್ಲಿ ಕುಳಲಿ ಗ್ರಾಮದ ಪ್ರಗತಿಪರ ರೈತರಾದ ಕಲ್ಯಾಣಿ ಮಂಟೂರ, ಪರಶುರಾಮ ಗಣಿ, ಶಂಭು ಗಣಿ, ಈರಪ್ಪ ಗಣಿ, ಮುತ್ತು ಗಣಿ, ಬಸವರಾಜ ಐಹೊಳೆ, ಪ್ರವೀಣ ಐಹೊಳೆ, ಸಂಜು ನಡುವಿನಮನಿ, ಮಹಾದೇವ ಪವಾಡಶೆಟ್ಟಿ, ಚಂದ್ರಶೇಖರ ಪವಾಡಶೆಟ್ಟಿ ಸೇರಿದಂತೆ ಹಲವು ರೈತರು ಭಾಗವಹಿಸಿ ಅರಿಶಿನ ಸಸಿಗಳನ್ನು ನೆಡುವ ಮೂಲಕ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡರು.

ಇದೇ ವೇಳೆ ಮುಗಳಖೋಡ ಗ್ರಾಮದ ರಮೇಶ ಹುಂಡೇಕಾರ, ಢವಳೇಶ್ವರದ ಸತೀಶ್ ದೇಶಪಾಂಡೆ, ಬಸವರಾಜ ಹವಾಲ್ದಾರ, ಶಿರೋಳದ ಈರಪ್ಪ ನಿಶ್ಯಾನಿ, ನಾಗಪ್ಪ ಢವಳೇಶ್ವರ, ಹನುಮಂತ ಫಡತಾರೆ, ಸುಭಾಷ ವಾಲೀಮರದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅರಿಶಿನ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಈ ಪ್ರಾತ್ಯಕ್ಷಿಕೆ ರೈತರಿಗೆ ಉಪಯುಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರು ಅರಿಶಿನ ಬೆಳೆಯತ್ತ ಆಸಕ್ತಿ ತೋರಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande