ಪೂಜಾರಹಳ್ಳಿ ಮಹಿಳೆ ನಾಪತ್ತೆ
ಕೂಡ್ಲಿಗಿ, 15 ಜೂನ್ (ಹಿ.ಸ.) : ಆ್ಯಂಕರ್ : ಕೂಡ್ಲಿಗಿ ತಾಲ್ಲೂಕಿನ ಪೂಜಾರಹಳ್ಳಿ ತಾಂಡದ ನಿವಾಸಿ ದಿವ್ಯ ಬಾಯಿ (30) ಮಹಿಳೆ 2025ರ ಅ.27 ರಂದು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಪುನ: ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿ
ಪೂಜಾರಹಳ್ಳಿ ಮಹಿಳೆ ಕಾಣೆ: ಪತ್ತೆಗೆ ಮನವಿ


ಕೂಡ್ಲಿಗಿ, 15 ಜೂನ್ (ಹಿ.ಸ.) :

ಆ್ಯಂಕರ್ : ಕೂಡ್ಲಿಗಿ ತಾಲ್ಲೂಕಿನ ಪೂಜಾರಹಳ್ಳಿ ತಾಂಡದ ನಿವಾಸಿ ದಿವ್ಯ ಬಾಯಿ (30) ಮಹಿಳೆ 2025ರ ಅ.27 ರಂದು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಪುನ: ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.

ಮಹಿಳೆಯ ಚಹರೆ ಗುರುತು: ಎತ್ತರ 5.3 ಅಡಿ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಮನೆಯಿಂದ ಹೊರಡುವಾಗ ಕಂದು ಬಣ್ಣದ ಸೀರೆ ಮತ್ತು ಚೋಲಿ ಧರಿಸಿರುತ್ತಾರೆ. ಕನ್ನಡ, ಲಂಬಾಣಿ ಮಾತನಾಡುತ್ತಾಳೆ.

ಕಾಣೆಯಾದ ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande