
ಗದಗ, 15 ಜೂನ್ (ಹಿ.ಸ.) :
ಆ್ಯಂಕರ್ : ವಿಶ್ವ ಕಲ್ಯಾಣ ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಶ್ರೀಮತಿ ಮಂಗಳಾ ಹಾದಿಮನಿ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಕಾರ್ಯಕ್ರಮದ ಮುಖ್ಯ ಆಥಿತಿಗಳಾಗಿ ಗಣ್ಯ ಉದ್ಯಮಿಗಳಾದ ರಾಜೇಶ ಹಾದಿಮನಿ ಮಾತನಾಡಿ, ಸಮಾಜದಲ್ಲಿ ಅವಕಾಶವಂಚಿತ ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ತರಬೇತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ನಿಸ್ವಾರ್ಥ ಸೇವೆ ಮಾಡುತ್ತಿರುವ ಈ ಸಂಸ್ಥೆಗೆ ನನ್ನ ಸಹಾಯ ನೀಡುವುದರೊಂದಿಗೆ ಹಾಗೂ ಎಲ್ಲ ದಾನಿಗಳಿಂದ ಸಹಾಯ-ಸಹಕಾರ ಕೊಡಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಮಂಗಳಾ ಹಾದಿಮನಿಯವರು ಮಾತನಾಡಿ, ದೇವರು ಯಾವ ದೇವಸ್ಥಾನ ಇಲ್ಲಾ ಇಲ್ಲಿಯೇ ಇದ್ದಾನೆ, ದಿವ್ಯಾಂಗರಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ. ಅವರನ್ನು ವೈಜ್ಞಾನಿಕವಾಗಿ ಶಿಕ್ಷಣ ಹಾಗೂ ತರಬೇತಿ ನೀಡಿ, ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸುವ ಹಾಗೆ ಮಾಡಿ, ಅವರಲ್ಲಿ ಸೂಪ್ತವಾದ ಶಕ್ತಿಯನ್ನು ಹೊರತರುವ ಈ ಸೇವಾ ಕಾರ್ಯ ದೇವರು ಮೆಚ್ಚುವಂತಹದ್ದು, ಇಂದು ನನ್ನ ಹುಟ್ಟುಹಬ್ಬವನ್ನು ಸ್ವರ್ಗದಲ್ಲಿಯೇ ಆಚರಿಸಿಕೊಂಡಷ್ಟು ಸಂತೋಷವಾಗಿದೆ. ದೇವರ ಸ್ವರೂಪಿಗಳಾದ ಈ ಮಕ್ಕಳ ಆಶೀರ್ವಾದ ನಮಗೆ ದೊರೆತ್ತಿದ್ದರಿಂದ ನಮ್ಮೆಲ್ಲಾ ಕಷ್ಟಗಳೂ ಇಂದಿಗೆ ದೂರವಾದವೆಂದು ಭಾವುಕರಾಗಿ ಹೇಳುತ್ತ, ಈ ಸೇವಾ ಕಾರ್ಯಕ್ಕೆ ನಿರಂತರವಾಗಿ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು.
ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರ ಪ್ರಾಸ್ತವಿಕವಾಗಿ ಮಾತನಾಡಿ, ತಮ್ಮ ಹುಟ್ಟುಹಬ್ಬದ ನಿಮಿತ್ಯ ದೇವರ ಸ್ವರೂಪಿಗಳಾದ ಈ ಮಕ್ಕಳಿಗೆ ಸಿಹಿಯೊಂದಿಗೆ ಊಟದ ವ್ಯವಸ್ಥೆ ಮಾಡಿ, ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಎಂದು ಹೇಳಿದ ಶ್ರೀಮತಿ ಮಂಗಳಾ ಹಾದಿಮನಿ ಹಾಗೂ ಕುಟುಂಬಸ್ಥರು ನಮ್ಮ ಸೇವಾ ಕಾರ್ಯಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ. ಇವರಿಗೆ ಭಗವಂತ ಸಕಲ ಇಷ್ಟಾರ್ಥಗಳನ್ನು ಹಾಗೂ ಆಯುರ್ ಆರೋಗ್ಯವನ್ನು ಕರಣಿಸಲೆಂದು ಹಾರೈಸಿ, ಕೃತಜ್ಞತೆಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಎಲ್ಲ ವಿಶೇಷ ಮಕ್ಕಳೊಂದಿಗೆ ಶ್ರೀಮತಿ ಮಂಗಳಾ ಹಾದಿಮನಿ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಸಿಹಿಯೊಂದಿಗೆ ಊಟದ ವ್ಯವಸ್ಥೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಆರ್ಯನ್ ಹಾದಿಮನಿ, ಇಂದ್ರಮ್ಮಾ ದೊಡ್ಡಮನಿ, ನಾರಾಯಣ ದೊಡ್ಡಮನಿ, ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು, ಕೊನೆಗೆ ಎಲ್ಲರಿಗೂ ಸಿಹಿಯೊಂದಿಗೆ ಊಟವನ್ನು ಬಡಿಸಿದರು. ಆಗಮಿಸಿದೆಲ್ಲರೂ ವಿಶೇಷ ಮಕ್ಕಳಿಗೆ ಸಿಹಿಯೊಂದಿಗೆ ಊಟವನ್ನು ತಿನ್ನಿಸಿದ್ದು ತುಂಬಾ ವಿಶೇಷವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / lalita MP