ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿಗೆ ಮಹದೇವ ಕಾಂಬಳೆ ಆಯ್ಕೆ
ವಿಜಯಪುರ, 15 ಜೂನ್ (ಹಿ.ಸ.) : ಆಂಕರ್ : ಮ್ಯಾನುವಲ್ ಸ್ಕವೆಂಜರ್ಗಳ ನಿಯೋಜನೆ ನಿಷೇಧ ಹಾಗೂ ಪುನರ್ವಸತಿ ಕಾಯ್ದೆ–2013ರ ಅನ್ವಯ 2026-27ನೇ ಸಾಲಿನ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯ ಸರ್ಕಾರೇತರ ಸದಸ್ಯರಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರದ ಸಮಾಜಸೇವಕ ಹಾ
ಆಯ್ಕೆ


ವಿಜಯಪುರ, 15 ಜೂನ್ (ಹಿ.ಸ.) :

ಆಂಕರ್ : ಮ್ಯಾನುವಲ್ ಸ್ಕವೆಂಜರ್ಗಳ ನಿಯೋಜನೆ ನಿಷೇಧ ಹಾಗೂ ಪುನರ್ವಸತಿ ಕಾಯ್ದೆ–2013ರ ಅನ್ವಯ 2026-27ನೇ ಸಾಲಿನ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯ ಸರ್ಕಾರೇತರ ಸದಸ್ಯರಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರದ ಸಮಾಜಸೇವಕ ಹಾಗೂ ಧುರೀಣರಾದ ಮಹದೇವ ಎಸ್. ಕಾಂಬಳೆ ಅವರನ್ನು ಆಯ್ಕೆ ಮಾಡಲಾಗಿದೆ.

ಮಾನ್ಯ ಜಿಲ್ಲಾಧಿಕಾರಿಗಳು 11-06-2026 ರಂದು ನಡೆಸಿದ ಸಭೆಯ ನಡವಳಿಕೆಯ ಅನ್ವಯ ಜಾಗೃತಿ ಸಮಿತಿ ರಚನೆಗೆ ಆದೇಶ ಹೊರಡಿಸಿದ್ದು, ಅದರಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಪೊತದ್ದಾರ ಅವರು ಮಹದೇವ ಕಾಂಬಳೆ ಅವರಿಗೆ ನೇಮಕಾತಿ ಆದೇಶವನ್ನು ನೀಡಿದ್ದಾರೆ.

ಈ ನೇಮಕಾತಿಯು ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಸರ್ಕಾರದಿಂದ ಮುಂದಿನ ಆದೇಶ ಹೊರಡಿಸುವವರೆಗೆ ಜಾರಿಯಲ್ಲಿರಲಿದೆ. ಸಮಿತಿಯ ತ್ರೈಮಾಸಿಕ ಸಭೆಗಳಿಗೆ ಹಾಜರಾಗಿ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳು, ಹಕ್ಕುಗಳು ಹಾಗೂ ಪುನರ್ವಸತಿ ಕ್ರಮಗಳ ಕುರಿತು ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡುವಂತೆ ಮಹದೇವ ಕಾಂಬಳೆ ಅವರಿಗೆ ಸೂಚಿಸಲಾಗಿದೆ.

ಸಫಾಯಿ ಕರ್ಮಚಾರಿಗಳನ್ನು ಕೇವಲ ಮಾನವ ಸಂಪನ್ಮೂಲವಾಗಿ ಬಳಸಿಕೊಳ್ಳದೆ, ಅವರ ಸಾಮಾಜಿಕ, ಆರ್ಥಿಕ ಹಾಗೂ ಜೀವನಮಟ್ಟದ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಮಿತಿಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಹದೇವ ಕಾಂಬಳೆ ಅವರ ಅನುಭವ ಹಾಗೂ ಸಮಾಜಮುಖಿ ಕಾರ್ಯಗಳು ಸಮಿತಿಗೆ ಸಹಕಾರಿಯಾಗಲಿವೆ ಎಂದು ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ.

ನೇಮಕಾತಿ ಆದೇಶದ ಹಿನ್ನೆಲೆಯಲ್ಲಿ ಮಹದೇವ ಕಾಂಬಳೆ ಅವರನ್ನು ವಿವಿಧ ಮುಖಂಡರು, ಸಮಾಜಸೇವಕರು ಹಾಗೂ ಹಿತೈಷಿಗಳು ಅಭಿನಂದಿಸಿದ್ದಾರೆ. ಸಫಾಯಿ ಕರ್ಮಚಾರಿಗಳ ಕಲ್ಯಾಣ, ಸುರಕ್ಷತೆ ಮತ್ತು ಪುನರ್ವಸತಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande