ಕೊಪ್ಪಳ : 228ನೇ ದಿನದ ಬಲ್ಡೋಟ ಹೋರಾಟ
ಕೊಪ್ಪಳ, 15 ಜೂನ್ (ಹಿ.ಸ.) : ಆ್ಯಂಕರ್ : ಜಿಲ್ಲಾಧಿಕಾರಿಗಳು ಬಸಾಪುರ ಕೆರೆಗೆ ಸಂಬಂಧಿಸಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಕಾಂಪೌಂಡ್ ಹಾಕಿದ ಬಲ್ಡೋಟ ಕಂಪನಿ ಮೇಲೆ ತಕ್ಷಣ ಕ್ರಮ ಜರುಗಿಸಿ ಅಡ್ಡಗಟ್ಟಿದ ಸಂಪರ್ಕ ರಸ್ತೆಯನ್ನು ಜನ, ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು ಎಂದು ಬಳ್ಳಾರಿ ಜಿಲ್ಲಾ ರಾಜ್
Even though Baldota has excluded the lake from its map, it is of no use


Even though Baldota has excluded the lake from its map, it is of no use


ಕೊಪ್ಪಳ, 15 ಜೂನ್ (ಹಿ.ಸ.) :

ಆ್ಯಂಕರ್ : ಜಿಲ್ಲಾಧಿಕಾರಿಗಳು ಬಸಾಪುರ ಕೆರೆಗೆ ಸಂಬಂಧಿಸಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಕಾಂಪೌಂಡ್ ಹಾಕಿದ ಬಲ್ಡೋಟ ಕಂಪನಿ ಮೇಲೆ ತಕ್ಷಣ ಕ್ರಮ ಜರುಗಿಸಿ ಅಡ್ಡಗಟ್ಟಿದ ಸಂಪರ್ಕ ರಸ್ತೆಯನ್ನು ಜನ, ಜಾನುವಾರು ನೀರು ಕುಡಿಯಲು ಮುಕ್ತಗೊಳಿಸಬೇಕು ಎಂದು ಬಳ್ಳಾರಿ ಜಿಲ್ಲಾ ರಾಜ್ಯ ರೈತ ಸಂಘದ ಅಧ್ಯಕ್ಷ ಎಂ.ಎಲ್.ಕೆ ನಾಯ್ಕು 228ನೇ ದಿನದ ಹೋರಾಟದ ವೇದಿಕೆಯಲ್ಲಿ ನಕ್ಷೆ ತೋರಿಸಿ ಮಾತನಾಡಿದರು.

ಕಂಪನಿ ಅಧಿಕೃತವಾದ ತನ್ನ ನಕ್ಷೆ ವ್ಯಾಪ್ತಿಯ ಹೊರಗೆ ಬಸಾಪುರ ಸ.ನಂ. 143ರ 44.35 ಎಕರೆ ವಿಸ್ತೀರ್ಣದ ಕೆರೆ ಇದೆ ಎಂದು ಅವರೇ ತೋರಿಸಿದ್ದಾರೆ. ಹೀಗಿದ್ದಾಗಲೂ ಈ ಹಿಂದಿನ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ, ತಹಶೀಲ್ದಾರ್ ಚೌಗಲಾ ಅವರು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕೆರೆಯ ಸುತ್ತ ಕಂಪನಿಯವರು ಕಾಂಪೌಂಡ್ ಕಟ್ಟಲು ಆನುಮತಿ ಕೊಟ್ಟು ಅಕ್ರಮದಲ್ಲಿ ಭಾಗಿಯಾಗಿದ್ದಿರೆ.

ಇವರ ಮೇಲೆ ಜಿಲ್ಲಾಧಿಕಾರಿಗಳು ತನಿಖೆ ಮಾಡಿಸಿ ಜಿಲ್ಲಾಧಿಕಾರಿಗಳ ಮೌಖಿಕ ನಿರ್ದೇಶನವಿದೆ ಎಂದು ಅಧಿಕಾರ ದುರುಪಯೋಗ ಮೇಲ್ನೋಟದಲ್ಲಿ ಕಂಡು ಬಂದರೂ ಯಾಕೆ ಕ್ರಮ ಜರುಗಿಸಿಲ್ಲ. ಅದರ ಜತೆಗೆ ಈ ಉಲ್ಲಃಘನೆಯ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತರಬೇಕಿದೆ. ಇದರ ಹೊರತು ಕಾರ್ಖಾನೆಯಿಂದ ಕೆರೆ ಮಂಜೂರಿ ಶರತ್ತು ಉಲ್ಲಂಘನೆಗೆಯಾಗಿದ್ದಕ್ಕೆ ನೋಟೀಸ್ ಜಾರಿ ಮಾಡಿ ಮೌನವಹಿಸಿದರೆ ಬಸಾಪುರ ಗ್ರಾಮದ ಸುತ್ತಲಿನ ರೈತರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಕೂಡಲೇ ಜಿಲ್ಲಾಧಿಕಾರಿಗಳು ತಕ್ಷಣದಿಂದಲೆ ಕ್ರಮ ಕೈಗೊಂಡು ಅನಧಿಕೃತ ಕಾಂಪೌಂಡ್ ತೆರವು ಮಾಡಬೇಕು. ಇಲ್ಲದಿದ್ದರೆ ನಾವೇ ಕೆರೆಯನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಘೋಷಿಸಿದರು.

ಧರಣಿಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ನಿವೃತ್ತ ಉಪನ್ಯಾಸಕ ಮಹಾದೇವಪ್ಪ ಮಾವಿನಮಡು, ರಾಜಶೇಖರ ಏಳುಭಾವಿ, ಶಿವಪ್ಪ ಜಲ್ಲಿ, ರೇವಣಪ್ಪ ಎಸ್.ಕೆ, ಅಭಿಜಿತ್ ಅಂಡಗಿ, ಶಿವಮ್ಮ ಚಾಕ್ರಿ, ಸಾವಿತ್ರಿ ತೆಗ್ಗಿನಮನಿ, ಮಲ್ಲಮ್ಮ ನಾಗರಡ್ಡಿ, ಶರಣಪ್ಪ ತೆಗ್ಗಿನಮನಿ, ಗುಡದಪ್ಪ ಭಂಗಿ, ಶೇಖರಗೌಡ ಎ ಪಾಟೀಲ ಲಕಮಾಪುರ, ಮಜರಪ್ಪ ಹೊಸಮನಿ, ವಿಶಾಲಾಕ್ಷಿ ಅಬ್ಬಿಗೇರಿ, ಗೌರಮ್ಮ ಆರೇರ, ತೃತಿಯಲಿಂಗಿ ಅನು ಹೊಸಪೇಟೆ ಮುಂತಾದವರು ಪಾಲ್ಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande