

ಬಳ್ಳಾರಿ, 15 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಖ್ಯಾತ ಚಿತ್ರಕಲಾವಿದ, ಕರ್ನಾಟಕ ಲಲಿತಕಲಾ ಅಕಾಡಮಿಯ `ವರ್ಣಶ್ರೀ' ಪ್ರಶಸ್ತಿ ಪುರಸ್ಕೃತ ಮಂಜುನಾಥ ಗೋವಿಂದವಾಡ ಅವರು ಸೋಮವಾರ ನಸುಕಿನಲ್ಲಿ ಮೃತಪಟ್ಟಿದ್ದು, ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಮೃತರಿಗೆ ಪತ್ನಿ, ಪುತ್ರ, ಪುತ್ರಿ, ತಾಯಿ ಮತ್ತು ಸಹೋದರ ಇದ್ದಾರೆ.
ಮೃತರ ಆಂತ್ಯಕ್ರಿಯೆ ವೀರಶೈವ ವಿಧಿ ವಿಧಾನಗಳ ಪ್ರಕಾರ ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ಸೋಮವಾರ ಸಂಜೆ 3 ಗಂಟೆ ಸುಮಾರಿಗೆ ಗುರು - ಹಿರಿಯರ ಸಮ್ಮುಖದಲ್ಲಿ ನೆರವೇರಲಿದೆ.
ಮೃತರ ಆತ್ಮಕ್ಕೆ ಶಾಂತಿಕೋರಿ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಸೇರಿ ಕಲಾವಿದರು, ಅಧಿಕಾರಿಗಳು ಮತ್ತು ಆಪ್ತರು ಸಂತಾಪ ಸೂಚಿಸಿದ್ದಾರೆ.
ಆಸಕ್ತರು : 94491 36960 ಗೆ ಸಂಪರ್ಕಿಸಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್