ಅಮರಾಪುರದ ಯುವಕ ನಾಪತ್ತೆ
ಬಳ್ಳಾರಿ, 15 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ತಾಲ್ಲೂಕಿನ ಅಮರಾಪುರ ಗ್ರಾಮದ ನಿವಾಸಿ ಉಮೇಶ (23) ಜೂನ್ 13 ರಂದು ಸಪ್ತಭಜನೆ ಮಾಡಲು ಚೇಳ್ಳಗುರ್ಕಿ ಗ್ರಾಮಕ್ಕೆ ಹೊಗಿ ಬರುವುದಾಗಿ ಹೇಳಿ ಪುನ: ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಬಳ್ಳಾರಿ ಗಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ
A young man from Amarapura is missing


ಬಳ್ಳಾರಿ, 15 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ತಾಲ್ಲೂಕಿನ ಅಮರಾಪುರ ಗ್ರಾಮದ ನಿವಾಸಿ ಉಮೇಶ (23) ಜೂನ್ 13 ರಂದು ಸಪ್ತಭಜನೆ ಮಾಡಲು ಚೇಳ್ಳಗುರ್ಕಿ ಗ್ರಾಮಕ್ಕೆ ಹೊಗಿ ಬರುವುದಾಗಿ ಹೇಳಿ ಪುನ: ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಬಳ್ಳಾರಿ ಗಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.

ಚಹರೆ ಗುರುತು: ಎತ್ತರ 5.2 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೊರಡುವಾಗ ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಮಾತನಾಡುತ್ತಾನೆ.

ಕಾಣೆಯಾದ ಯುವಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392276461, 9480803049, ಬಳ್ಳಾರಿ ಎಸ್.ಪಿ ಕಚೇರಿ ದೂ.08392-258400 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande