ಈಶ್ವರ ಖಂಡ್ರೆ `ಉಪ ಮುಖ್ಯಮಂತ್ರಿ' : ವೀರಶೈವ ಮಹಾಸಭಾ ಆಗ್ರಹ
ಬಳ್ಳಾರಿ, 01 ಜೂನ್ (ಹಿ.ಸ.) : ಆ್ಯಂಕರ್ : ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕಾಂಗ್ರೆಸ್ನ ಹಿರಿಯ ಮುಖಂಡರಾಗಿರುವ ಈಶ್ವರ ಖಂಡ್ರೆ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಸಬೇಕು ಎಂದು ಅಖಿಲ ಭಾರತ ವೀರಶೈವ
ಈಶ್ವರಖಂಡ್ರೆ ಅವರನ್ನು `ಉಪ ಮುಖ್ಯಮಂತ್ರಿ'ಯನ್ನಾಗಿಸಿ :  ವೀರಶೈವ ಮಹಾಸಭಾದ ಆಗ್ರಹ


ಈಶ್ವರಖಂಡ್ರೆ ಅವರನ್ನು `ಉಪ ಮುಖ್ಯಮಂತ್ರಿ'ಯನ್ನಾಗಿಸಿ :  ವೀರಶೈವ ಮಹಾಸಭಾದ ಆಗ್ರಹ


ಈಶ್ವರಖಂಡ್ರೆ ಅವರನ್ನು `ಉಪ ಮುಖ್ಯಮಂತ್ರಿ'ಯನ್ನಾಗಿಸಿ :  ವೀರಶೈವ ಮಹಾಸಭಾದ ಆಗ್ರಹ


ಬಳ್ಳಾರಿ, 01 ಜೂನ್ (ಹಿ.ಸ.) :

ಆ್ಯಂಕರ್ : ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕಾಂಗ್ರೆಸ್ನ ಹಿರಿಯ ಮುಖಂಡರಾಗಿರುವ ಈಶ್ವರ ಖಂಡ್ರೆ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕ ಆಗ್ರಹಿಸಿದೆ.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರಾಗಿರುವ ಬಿಚ್ಚಗಲ್ ಪಂಚಾಕ್ಷರಪ್ಪ ಅವರು ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ವೀರಶೈವ - ಲಿಂಗಾಯಿತ ಮಠ ಮಾನ್ಯಗಳು - ವೀರಶೈವ ಸಮಾಜದವರ ಅಮೂಲಾಗ್ರವಾದ ಪಾಲಿದೆ. ನೂತನ ಸಚಿವ ಸಂಪುಟದಲ್ಲಿ ವೀರಶೈವ - ಲಿಂಗಾಯಿತರಿಗೆ ಆದ್ಯತೆ ನೀಡಬೇಕು ಎಂದರು.

ಕರ್ನಾಟಕದಲ್ಲಿ ಮೂವತ್ತೂ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ - ಲಿಂಗಾಯಿತ ಶಾಸಕರ ಪಕ್ಷ ನಿಷ್ಠೆ, ಸೇವೆ ಹಾಗೂ ಜನಸಂಪರ್ಕಗಳನ್ನು ಪರಿಗಣಿಸಿ ಸೂಕ್ತವಾದ ಹುದ್ದೆಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಈಶ್ವರಖಂಡ್ರೆ ಅವರನ್ನು ಪ್ರಪ್ರಥಮವಾಗಿ ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ವೀರಶೈವ - ಲಿಂಗಾಯಿತರಿಗೆ ರಾಜಕೀಯ ಪ್ರಾತಿನಿಧ್ಯತೆ ಇಲ್ಲವಾಗಿದೆ. ಇಲ್ಲಿರುವ ವೀರಶೈವ - ಲಿಂಗಾಯಿತ ಸಮುದಾಯವು ಸಂಪ್ರದಾಯಬದ್ಧವಾಗಿ ಕಾಂಗ್ರೆಸ್ ಪಕ್ಷದ ಜೊತೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಪಕ್ಷವು ಜಿಲ್ಲೆಯ ವೀರಶೈವ - ಲಿಂಗಾಯಿತರನ್ನು ನಿರ್ಲಕ್ಷಿಸದಂತೆ, ಎಚ್ಚರವಹಿಸಿ ವಿಧಾನಪರಿಷತ್ ಸದಸ್ಯತ್ವ, ರಾಜ್ಯಮಟ್ಟದ ನಿಗಮ - ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕೋರಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಆಂಧ್ರಪ್ರದೇಶ ರಾಜ್ಯಾಧ್ಯಕ್ಷ ದಂಡಿನ ಶಿವಾನಂದ, ಬಳ್ಳಾರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗಂಗಾವತಿ ವೀರೇಶ, ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಕೋರಿ ವಿರುಪಾಕ್ಷಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಕರೇಗೌಡ, ಅಂಗಡಿ ಶಂಕರ್, ಮುಖಂಡರಾಗಿರುವ ಹೊನ್ನನಗೌಡ, ಯ್ಯಾಳ್ಪಿ ದಿವಾಕರ, ಜೆ.ವಿ. ಮಂಜುನಾತ್, ಕೋರಿ ಚನ್ನಬಸವನಗೌಡ (ಪುಟ್ಟ), ಬಿ. ನಾಗಭೂಷಣ, ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande