
ವಿಜಯಪುರ, 01 ಜೂನ್ (ಹಿ.ಸ.) :
ಆಂಕರ್ : ವ್ಯಕ್ತಿಯ ದೈಹಿಕ ಸ್ಥಿತಿ ಯಾವುದೇ ಆಗಿರಲಿ, ಸಮಾಜದ ಬಗ್ಗೆ ಇರುವ ಕಾಳಜಿ, ದೇಶದ ಮೇಲಿನ ಪ್ರೀತಿ ಹಾಗೂ ನಾಯಕತ್ವದ ಮೇಲಿನ ನಂಬಿಕೆ ದೊಡ್ಡದು ಎಂಬುದನ್ನು ವಿಶೇಷ ಚೇತನ ಯುವಕ ಲೋಕನಾಥ್ ಕೊಲಕಾರ ಅವರು ತಮ್ಮ ಅಭಿಪ್ರಾಯಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ವಲಯದಲ್ಲಿ ತಮ್ಮ ಸರಳ ಹಾಗೂ ನೇರ ಮಾತುಗಳಿಂದ ಗಮನ ಸೆಳೆಯುತ್ತಿರುವ ಲೋಕನಾಥ್ ಕೊಲಕಾರ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಾಯಕತ್ವವನ್ನು ಮೆಚ್ಚಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
“ನಮ್ಮ ಬಸನಗೌಡ ಪಾಟೀಲ ಯತ್ನಾಳ್ ಅವರು ಜನರ ನಡುವೆ ಬದುಕುವ ನಾಯಕ. ಅಧಿಕಾರಕ್ಕಾಗಿ ಅಲ್ಲ, ತಮ್ಮ ನಿಲುವು ಮತ್ತು ಸಿದ್ಧಾಂತಕ್ಕಾಗಿ ಹೋರಾಡುವ ವ್ಯಕ್ತಿತ್ವ. ಸತ್ಯವನ್ನು ನೇರವಾಗಿ ಹೇಳುವ ಧೈರ್ಯ, ಭ್ರಷ್ಟಾಚಾರದ ವಿರುದ್ಧದ ಕಠಿಣ ನಿಲುವು, ರೈತರು, ಬಡವರು ಹಾಗೂ ಸಾಮಾನ್ಯ ಜನರ ಪರ ಇರುವ ಕಾಳಜಿ ಅವರ ಶಕ್ತಿಯಾಗಿದೆ” ಎಂದು ಲೋಕನಾಥ್ ಹೇಳಿದ್ದಾರೆ.
ಅವರು ಮುಂದುವರಿದು, “ಇಂತಹ ನಾಯಕರು ಸಮಾಜಕ್ಕೆ ಅಗತ್ಯ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿರುವ ನಾಯಕತ್ವ ರಾಜ್ಯದ ಪ್ರಗತಿಗೆ ಮುಖ್ಯವಾಗಿದೆ. ಬಸನಗೌಡ ಪಾಟೀಲ ಯತ್ನಾಳ್ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಜನಸೇವೆ ಮಾಡುವ ಅವಕಾಶ ಪಡೆಯಲಿ ಎಂಬುದು ನನ್ನ ಆಶಯ” ಎಂದು ತಿಳಿಸಿದ್ದಾರೆ.
ಲೋಕನಾಥ್ ಕೊಲಕಾರ ಅವರ ಈ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕರು ಅವರ ಸ್ಪಷ್ಟತೆ ಮತ್ತು ನಾಯಕತ್ವದ ಬಗ್ಗೆ ಇರುವ ನಂಬಿಕೆಯನ್ನು ಮೆಚ್ಚಿದ್ದಾರೆ. ವಿಶೇಷ ಚೇತನರಾಗಿದ್ದರೂ ಸಮಾಜದ ಬೆಳವಣಿಗೆ, ರಾಜಕೀಯ ಬೆಳವಣಿಗೆಗಳು ಹಾಗೂ ಜನಪರ ಆಡಳಿತದ ಬಗ್ಗೆ ಆಸಕ್ತಿ ಹೊಂದಿರುವ ಅವರ ಮನೋಭಾವ ಹಲವರಿಗೆ ಪ್ರೇರಣೆಯಾಗಿದೆ.
ರಾಜಕೀಯ ನಾಯಕರ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುವುದರ ಜೊತೆಗೆ, ರಾಜ್ಯದ ಅಭಿವೃದ್ಧಿ, ರೈತರ ಕಲ್ಯಾಣ ಹಾಗೂ ಸಾಮಾನ್ಯ ಜನರ ಜೀವನಮಟ್ಟ ಸುಧಾರಣೆಯಾಗಬೇಕೆಂಬ ಆಶಯವನ್ನು ಲೋಕನಾಥ್ ಹಂಚಿಕೊಂಡಿದ್ದಾರೆ. ಅವರ ಮಾತುಗಳು ನಾಯಕತ್ವದ ಮೇಲಿನ ನಂಬಿಕೆ ಮತ್ತು ಜನಸೇವೆಯ ಮೌಲ್ಯಗಳನ್ನು ಪ್ರತಿ ಬಿಂಬಿಸುವಂತಿವೆ.
ಹಿಂದೂಸ್ತಾನ್ ಸಮಾಚಾರ್ / jyothi deshpande