



ಮರಿಯಮ್ಮನಹಳ್ಳಿ, 01 ಜೂನ್ (ಹಿ.ಸ.) :
ಆ್ಯಂಕರ್ : ತುಂಗಭದ್ರ ಜಲಾಯಶದಲ್ಲಿ ಸಂಗ್ರಹವಾಗಿರುವ 35 ಟಿಎಂಸಿಗೂ ಹೆಚ್ಚಿನ ಪ್ರಮಾಣದ ಹೂಳನ್ನು ತೆಗೆಸಲು ಸರ್ಕಾರದ ಗಮನ ಸೆಳೆಯಲಿಕ್ಕಾಗಿ ತುಂಗಭದ್ರ ರೈತ ಸಂಘದ ನೇತೃತ್ವದಲ್ಲಿ ಜೂನ್ 2ರ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ `ತುಂಗಭದ್ರ ಹೂಳೆತ್ತುವ ಜಾತ್ರೆ' ಪ್ರಾರಂಭವಾಗಲಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷರಾಗಿರುವ ಡಾ. ಪುರುಷೋತ್ತಮಗೌಡ ದರೂರು ಅವರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ವಿವಿಧ ಮಠಾಧೀಶರರು ಮತ್ತು ಮುಖಂಡರುಗಳ ನೇತೃತ್ವದಲ್ಲಿ ಮರಿಯಮ್ಮನಹಳ್ಳಿ ಸಮೀಪದ ಗೂಂಡಾ ಅತಿಥಿ ಗೃಹದ ಸಮೀಪದಲ್ಲಿ ಎರಡು ಜೆಸಿಬಿಗಳ ಮೂಲಕ 105 ಟ್ರ್ಯಾಕ್ಟರ್ ಗಳಲ್ಲಿ ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿರುವ ಹೂಳನ್ನು ತೆಗೆಯಲಾಗುತ್ತದೆ. ಈ ಸೇವಾ ಕಾರ್ಯದಲ್ಲಿ ರೈತರು, ಸ್ವಯಂ ಸೇವಕರು ಹಾಗೂ ವಿವಿಧ ಸಂಘ - ಸಂಸ್ಥೆಗಳವರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ತುಂಗಭದ್ರ `ಹೂಳಿನ ಜಾತ್ರೆ'ಯ ಯಶಸ್ವಿಗಾಗಿ ದರೂರು ವೀರಭದ್ರ ಸ್ವಾಮಿ ಪುಣ್ಯಕ್ಷೇತ್ರ, ಕೊಂಚಿಗೇರಿ ಗ್ರಾಮದ ರುದ್ರಪ್ಪ ತಾತನವರ ಮಠ,
ಚನ್ನಪಟ್ಟಣದ ದರ್ಗಾ, ಓರ್ವಾಯಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ನೆರವೇರಿಸಿ, ಪ್ರಾರ್ಥನೆ ಸಲ್ಲಿಸಿ ಹೂಳೆತ್ತುವ ಸ್ಥಳಕ್ಕೆ ರೈತರು ಟ್ರ್ಯಾಕ್ಟರ್ ಜೊತೆಯಲ್ಲಿ ಸಂಜೆ ಆಗಮಿಸಿ ಗೂಂಡಾ ಅಥಿತಿಗೃಹದ ಸಮೀಪದಲ್ಲಿ ರೈತರು
ಬೀಡುಬಿಟ್ಟಿದ್ದಾರೆ.
ನೀವೂ `ಹೂಳಿನ ಜಾತ್ರೆ'ಯಲ್ಲಿ ಪಾಲ್ಗೊಳ್ಳಲು ಆಸಕ್ತರು, ಡಾ. ಪುರುಷೋತ್ತಮಗೌಡ ದರೂರು, ಮೊಬೈಲ್ :99457 73393 ಗೆ ಕರೆ ಮಾಡಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್