
ಬಳ್ಳಾರಿ, 01 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ಫೀಡರ್ 11 ಮತ್ತು 12 ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕೆಲಸಕ್ಕೆ ಕಂಬಗಳ ಸ್ಥಳಾಂತರ ಕೆಲಸ ಕಾರ್ಯ ಕೈಗೊಳ್ಳುತ್ತಿರುವುರಿಂದ ಜೂ.02 ರಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಎಫ್-11 ರ ರಾಘವೇಂದ್ರ ಕಾಲೋನಿ 2ನೇ ಹಂತ, ಅಯ್ಯಪ್ಪ ಸ್ವಾಮಿ ಕಾಲೋನಿ, ಇಂಟೋರಿ ನಗರ, ಅನಂತಪುರ ರಸ್ತೆ, ಶೇಕ್ಷಾವಲಿ ದರ್ಗಾ, ತಾರಾನಾಥ ಆಸ್ಪತ್ರೆ ಮತ್ತು ಎಫ್-12 ರ ನಿಜಲಿಂಗಪ್ಪ ಕಾಲೋನಿ, ಲಲಿತಾ ಲೇಔಟ್, ಗೊಲ್ಲರ ನರಸಪ್ಪ ಕಾಲೋನಿ, ರಾಘವೇಂದ್ರ ಕಾಲೋನಿ 2ನೇ ಹಂತ, ದೀಪಕ್ ಕಾಲೋನಿ, ಕೆವಿಟಿ ನಗರ, ವೆಂಕಟೇಶ್ವರ ನಗರ, ಅನಂತಪುರ ರಸ್ತೆ, ಶೇಕ್ಷಾವಲಿ ದುರ್ಗಾ, ಕುಬೇರ ಲೇಔಟ್.
ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್