ಸಂಪನ್ಮೂಲ ಸಂಯೋಜಕರ ಆಯ್ಕೆಗೆ ಅರ್ಜಿ ಆಹ್ವಾನ
ಕಚೇರಿ
ಸಂಪನ್ಮೂಲ ಸಂಯೋಜಕರ ಆಯ್ಕೆಗೆ ಅರ್ಜಿ ಆಹ್ವಾನ


ಕೊಪ್ಪಳ, 25 ಮೇ (ಹಿ.ಸ.) :

ಆ್ಯಂಕರ್ : ಧರ್ತಿ ಆಭಾ ಜನ್ ಜಾತೀಯ ಗ್ರಾಮ ಉತ್ಕμರ್ï ಅಭಿಯಾನದಡಿ ಸಂಪನ್ಮೂಲ ಸಂಯೋಜಕರನ್ನು ಗೌರವಧನದ ಮೇಲೆ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ (MoTA) ರವರ ಹಾಗೂ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರ ನಿರ್ದೇಶನದಂತೆ DA-JGUA & Integrated Programme Management Unit (PMU) ಘಟಕಗಳನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲಾಗುತ್ತಿದೆ. ಧರ್ತಿ ಆಭಾ ಜನ್ ಜಾತೀಯ ಗ್ರಾಮ ಉತ್ಕμರ್ï ಅಭಿಯಾನದಡಿ ಜಿಲ್ಲಾ ಮಟ್ಟದ ಕೋಶದಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾ ಜೀವನೋಪಾಯ ಹಾಗೂ ಅರಣ್ಯ ಹಕ್ಕುಗಳಿಗೆ ಸಂಬಂಧಿಸಿದಂತೆ ಸಂಪನ್ಮೂಲ ಸಂಯೋಜಕರನ್ನು ಗೌರವಧನದ ಮೇಲೆ ಆಯ್ಕೆ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಜೂನ್ 1 ಕೊನೆಯ ದಿನವಾಗಿದ್ದು, ಆಸಕ್ತರು ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿಸಲ್ಲಿಸುವಂತೆ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande