ಬಾಗಲಕೋಟೆಯಲ್ಲಿ ಸೈಬರ್ ಅಪರಾಧ ತನಿಖೆ ಕುರಿತು ವಿಶೇಷ ಕಾರ್ಯಾಗಾರ
ಬಾಗಲಕೋಟೆ, 24 ಮೇ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಜಿಲ್ಲಾ ಪೊಲೀಸ್ ಕಾರ್ಯಾಲಯದ ಸಭಾಭವನದಲ್ಲಿ ಜಿಲ್ಲೆಯ ಎಲ್ಲಾ ತನಿಖಾಧಿಕಾರಿಗಳಿಗಾಗಿ ಸೈಬರ್ ಭದ್ರತೆ ಹಾಗೂ ಸೈಬರ್ ಅಪರಾಧ ತನಿಖೆಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಾಗಾರದಲ್ಲಿ ಸೈಬರ್ ಸೆಕ್ಯೂರಿಟಿ, ಸಾಮಾಜಿಕ ಜಾಲತಾ
Workshop


ಬಾಗಲಕೋಟೆ, 24 ಮೇ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಜಿಲ್ಲಾ ಪೊಲೀಸ್ ಕಾರ್ಯಾಲಯದ ಸಭಾಭವನದಲ್ಲಿ ಜಿಲ್ಲೆಯ ಎಲ್ಲಾ ತನಿಖಾಧಿಕಾರಿಗಳಿಗಾಗಿ ಸೈಬರ್ ಭದ್ರತೆ ಹಾಗೂ ಸೈಬರ್ ಅಪರಾಧ ತನಿಖೆಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಯಿತು.

ಕಾರ್ಯಾಗಾರದಲ್ಲಿ ಸೈಬರ್ ಸೆಕ್ಯೂರಿಟಿ, ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖಾ ವಿಧಾನಗಳು, ಸೈಬರ್ ಅಪರಾಧಗಳ ಅವಲೋಕನ ಹಾಗೂ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.

ಇದಲ್ಲದೇ ಡಿಜಿಟಲ್ ಫೊರೆನ್ಸಿಕ್ಸ್ ಪರಿಚಯ, ವಿದ್ಯುನ್ಮಾನ ಸಾಕ್ಷ್ಯದ ಸ್ವೀಕಾರಾರ್ಹತೆ, ಡಿಜಿಟಲ್ ಫೊರೆನ್ಸಿಕ್ಸ್ ತನಿಖೆಯ ಕಾರ್ಯವಿಧಾನಗಳು ಹಾಗೂ ಸೈಬರ್ ಕ್ರೈಂ ತನಿಖಾ ಪ್ರಕ್ರಿಯೆಗಳ ಕುರಿತು ತಜ್ಞರಿಂದ ವಿವರವಾದ ಉಪನ್ಯಾಸ ಮತ್ತು ಪ್ರಾಯೋಗಿಕ ಮಾರ್ಗದರ್ಶನ ನೀಡಲಾಯಿತು.

ಕಾರ್ಯಾಗಾರದಲ್ಲಿ ಪ್ರಮುಖ ಸೈಬರ್ ಅಪರಾಧಗಳ ಸ್ವರೂಪ, ಅವುಗಳ ತನಿಖಾ ವಿಧಾನಗಳು ಹಾಗೂ ತಾಂತ್ರಿಕ ಸಾಕ್ಷ್ಯ ಸಂಗ್ರಹಣೆಯ ಮಹತ್ವದ ಕುರಿತು ಅಧಿಕಾರಿಗಳಿಗೆ ವಿಶೇಷವಾಗಿ ತಿಳಿಸಿಕೊಡಲಾಯಿತು.

ಸೈಬರ್ ಅಪರಾಧ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ತಾಂತ್ರಿಕ ಜ್ಞಾನ ಮತ್ತು ಆಧುನಿಕ ತನಿಖಾ ವಿಧಾನಗಳ ಅರಿವು ಅಗತ್ಯವಾಗಿದ್ದು, ಈ ರೀತಿಯ ಕಾರ್ಯಾಗಾರಗಳು ತನಿಖಾಧಿಕಾರಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.

ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ತನಿಖಾಧಿಕಾರಿಗಳು ಹಾಗೂ ಸೈಬರ್ ತಜ್ಞರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande