ಎಸ್.ಎಸ್.ಕೆ ಸಮಾಜದ ರಾಜ್ಯ ಮಹಿಳಾ ಸಮಿತಿ ರಚನೆಗೆ ಪೂರ್ವಭಾವಿ ಸಭೆ
ಹುಬ್ಬಳ್ಳಿ, 24 ಮೇ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ನಗರದ ದಾಜಿಬಾನ ಪೇಟೆಯ ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ರಾಜ್ಯ ಮಹಿಳಾ ಸಮಿತಿ ರಚನೆ ಕುರಿತು ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಸಮಾಜದ ಸಂಘಟನೆ ಬಲಪಡಿಸುವುದು, ಮಹಿಳೆಯರ ಭಾಗ
Meeting


ಹುಬ್ಬಳ್ಳಿ, 24 ಮೇ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ನಗರದ ದಾಜಿಬಾನ ಪೇಟೆಯ ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ರಾಜ್ಯ ಮಹಿಳಾ ಸಮಿತಿ ರಚನೆ ಕುರಿತು ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಸಮಾಜದ ಸಂಘಟನೆ ಬಲಪಡಿಸುವುದು, ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಹಾಗೂ ರಾಜ್ಯ ಮಟ್ಟದಲ್ಲಿ ಮಹಿಳಾ ಸಮಿತಿಯನ್ನು ಪರಿಣಾಮಕಾರಿಯಾಗಿ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ರಾಜ್ಯ ಮಹಿಳಾ ಸಮಿತಿ ನಿರ್ದೇಶಕರಾದ ರೂಪಾ ಚೌದರಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ, ಎಸ್ಎಸ್ಕೆ ಸಮಾಜದ ರಾಜ್ಯಾಧ್ಯಕ್ಷರಾದ ಡಾ. ಶಶಿಕುಮಾರ್ ಮೆಹರ್ವಾಡೆ, ಸಮಾಜದ ವಿವಿಧ ಮುಖಂಡರು, ನಗರ ಮಹಿಳಾ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ರಾಜ್ಯ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande