ತೋಂಟದಾರ್ಯ ಮಠದಲ್ಲಿ 2799 ನೇ ಶಿವಾನುಭವ
ಗದಗ, 24 ಮೇ (ಹಿ.ಸ.) : ಆ್ಯಂಕರ್ : ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 25-05-2026 ರಂದು ಸೋಮವಾರ ಸಾಯಂಕಾಲ 7-00ಕ್ಕೆ ತೋಂಟದಾರ್ಯ ಮಠದಲ್ಲಿ 2799 ನೆಯ ಶಿವಾನುಭವ ಜರುಗಲಿದ್ದು, ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ಲಕ್ಷ್ಮೇಶ
ಫೋಟೋ


ಗದಗ, 24 ಮೇ (ಹಿ.ಸ.) :

ಆ್ಯಂಕರ್ : ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 25-05-2026 ರಂದು ಸೋಮವಾರ ಸಾಯಂಕಾಲ 7-00ಕ್ಕೆ ತೋಂಟದಾರ್ಯ ಮಠದಲ್ಲಿ 2799 ನೆಯ ಶಿವಾನುಭವ ಜರುಗಲಿದ್ದು, ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ‘ಮಾನವತಾವಾದಿ ಶ್ರೀ ಬಸವೇಶ್ವರ ಪ್ರಶಸ್ತಿ’ ಯನ್ನು ಖ್ಯಾತ ಜಲಸಂರಕ್ಷಕರಾದ ಶ್ರೀ ರಾಜೇಂದ್ರಸಿಂಗ್, ರಾಜಸ್ಥಾನ ಅವರಿಗೆ ಪ್ರಧಾನ ಮಾಡಲಾಗುವುದು. ಪ್ರಶಸ್ತಿ ಪ್ರದಾನವನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರು ಮಾಡಲಿದ್ದಾರೆ.

ಜೆ. ಕೆ. ಜಮಾದಾರ ಅವರು ಉಪನ್ಯಾಸ ನೀಡಲಿದ್ದು, ಅತಿಥಿಗಳಾಗಿ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಜಿ. ಎಸ್. ಗಡ್ಡದ್ದೇವರಮಠ, ಮಾಜಿ ವಿಧಾನಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಭಾಗವಹಿಸುವರು.

ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಎಲ್. ಲಿಂಬಯ್ಯಸ್ವಾಮಿಮಠ ಅವರು ಉಪಸ್ಥಿತಿ ವಹಿಸುವರು. ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ಅವರು ವಚನಸಂಗೀತ ಹಾಡುವರು. ಧರ್ಮಗ್ರಂಥ ಪಠಣವನ್ನು ಖುಷಿ ಜಗದೀಶ ಹಳ್ಳಿಕೇರಿ, ವಚನ ಚಿಂತನೆಯನ್ನು ಶ್ರಾವಣಿ ರಾಮಪ್ಪ ಕಳ್ಳಿಮನಿ ಇವರು ಮಾಡುವರು.

ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ಪ್ರಭು ಹುಚ್ಚಪ್ಪ ಹಳ್ಳಿಕೇರಿ ಇವರ ಸ್ಮರಣಾರ್ಥ ಶರಣೆ ಜಯಶ್ರೀ ಪ್ರಭು ಹಳ್ಳಿಕೇರಿ ಮತ್ತು ಪರಿವಾರ ವಹಿಸಿಕೊಂಡಿದ್ದಾರೆ. ಸದರಿ ಶಿವಾನುಭವ ಕಾರ್ಯಕ್ರಮದಲ್ಲಿ ಬಸವದಳ, ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಜಾತ್ರಾ ಮಹೋತ್ಸವ ಸಮಿತಿ, ಕದಳಿ ಮಹಿಳಾ ವೇದಿಕೆ ಸೇರಿದಂತೆ ಎಲ್ಲಾ ಶರಣ ಬಂಧುಗಳು, ಶ್ರೀಮಠದ ಸರ್ವಸದ್ಭಕ್ತರು ಪಾಲ್ಗೊಳ್ಳಬೇಕೆಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ವಿನಂತಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande