ಹಾರೋಹಳ್ಳಿಯಲ್ಲಿ ದೀಪೋತ್ಸವ ಸಂಭ್ರಮದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಭಾಗಿ
ಹಾರೋಹಳ್ಳಿಯಲ್ಲಿ ದೀಪೋತ್ಸವ ಸಂಭ್ರಮದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಭಾಗಿ
ಕೋಲಾರ ನಗರದ ಹಾರೋಹಳ್ಳಿಯ ದೀಪೋತ್ಸವ ಹಾಗೂ ಜಾತ್ರೆಯಲ್ಲಿ ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭಾಗವಹಿಸಿದ್ದು, ಅವರನ್ನು ಸನ್ಮಾನಿಸಲಾಯಿತು.


ಕೋಲಾರ, ೨೪ ಮೇ (ಹಿ.ಸ) :

ಆ್ಯಂಕರ್ : ದೀಪೋತ್ಸವ, ದೇವರ ಪೂಜೆಯಿಂದ ಮನಸ್ಸಿಗೆ ನೆಮ್ಮದಿ ಮಾತ್ರವಲ್ಲ, ಜೀವನದಲ್ಲಿ ಯಶಸ್ಸಿನತ್ತ ಸಾಗಲು ಅಗತ್ಯವಾದ ಚೈತನ್ಯವನ್ನೂ ನೀಡುತ್ತದೆ ಎಂದು ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದ ಹಾರೋಹಳ್ಳಿಯಲ್ಲಿ ನಡೆದ ದೀಪೋತ್ಸವ ಮತ್ತು ಜಾತ್ರೆಯಲ್ಲಿ ಪಾಲ್ಗೊಂಡು ಶುಭ ಕೋರಿದ ಅವರು, ಹಾರೋಹಳ್ಳಿ ನನ್ನೂರು, ಇಲ್ಲಿ ನಾನು ಬದುಕು ಕಂಡುಕೊAಡಿದ್ದೇನೆ ಎಂದ ಅವರು, ಇಲ್ಲಿನ ಜನತೆಯಲ್ಲಿನ ಭಕ್ತಿ ದೇವರ ಕಾರ್ಯಗಳು ಹೆಚ್ಚು ಪ್ರಸಿದ್ದಿಗಳಿಸಿವೆ. ದೀಪೋತ್ಸವದ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಮಳೆ,ಬೆಳೆಯಾಗಲಿ, ಜನತೆಗೆ ಉತ್ತಮ ಜೀವನ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ನಗರಸಭೆ ಮಾಜಿ ಸದಸ್ಯರಾದ ಎಸ್.ಆರ್.ಮುರಳಿಗೌಡ, ಪ್ರಸಾದ್ ಬಾಬು, ಮುಖಂಡರಾದ ಶ್ರೀಕೃಷ್ಣ, ರವಿ,ನಾರಾಯಣಸ್ವಾಮಿ ಸೇರಿದಂತೆ ಈ ಭಾಗದ ಹಲವಾರು ಹಿರಿಯರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande