ಬಿಡಿಸಿಸಿಐ ನೇತೃತ್ವದಲ್ಲಿ ಮೇ 26ರ ರಂದು `ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ' ಮೇಳ
ಬಳ್ಳಾರಿ, 23 ಮೇ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿವಿಧ ಇಲಾಖೆಗಳು ಮತ್ತು ರೈತ ಸಮೂಹದ ಸಹಕಾರದಲ್ಲಿ `ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ'' ವಿಷಯದ ಕೃಷಿ ಮೇಳವನ್ನು ಮೇ 26ರ ಮಂ
ಬಿಡಿಸಿಸಿಐ ನೇತೃತ್ವದಲ್ಲಿ ಮೇ 26ರ ರಂದು `ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ' ಮೇಳ


ಬಿಡಿಸಿಸಿಐ ನೇತೃತ್ವದಲ್ಲಿ ಮೇ 26ರ ರಂದು `ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ' ಮೇಳ


ಬಿಡಿಸಿಸಿಐ ನೇತೃತ್ವದಲ್ಲಿ ಮೇ 26ರ ರಂದು `ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ' ಮೇಳ


ಬಿಡಿಸಿಸಿಐ ನೇತೃತ್ವದಲ್ಲಿ ಮೇ 26ರ ರಂದು `ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ' ಮೇಳ


ಬಳ್ಳಾರಿ, 23 ಮೇ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿವಿಧ ಇಲಾಖೆಗಳು ಮತ್ತು ರೈತ ಸಮೂಹದ ಸಹಕಾರದಲ್ಲಿ `ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ಬಿತ್ತನೆ' ವಿಷಯದ ಕೃಷಿ ಮೇಳವನ್ನು ಮೇ 26ರ ಮಂಗಳವಾರ ಬಳ್ಳಾರಿಯ ಎಪಿಎಂಸಿ ಆವರಣದಲ್ಲಿ ನಡೆಯಲಿದೆ.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಮತ್ತು ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು ಅವರು ಈ ಕುರಿತು ಸುದ್ದಿಗಾರರಿಗೆ ಶನಿವಾರ ಮಾಹಿತಿ ನೀಡಿದ್ದು, ಅಂದು ಬೆಳಗ್ಗೆ 9 ಗಂಟೆಗೆ ನಗರೇಶ್ವರ ದೇವಸ್ಥಾನದಿಂದ ಜೋಡೆತ್ತಿನ ಬಂಡಿಗಳ ಜೊತೆಯಲ್ಲಿ ಸಾಂಸ್ಕøತಿಕ ತಂಡಗಳ ಜಾಥಾ ಪ್ರಾರಂಭವಾಗಲಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಡಾ. ಎಂ. ಹನುಮಂತಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಕೃಷಿ ವಿಜ್ಞಾನಿಗಳಾಗಿರುವ ಡಾ. ಎ.ಜಿ. ಶ್ರೀನಿವಾಸ್, ಡಾ. ರವಿಶಂಕರ್ ಜಿ. ಡಾ. ಪಾಲಯ್ಯ ಮತ್ತು ಡಾ. ಎಂ. ಭೀಮಣ್ಣ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಲಿದ್ದಾರೆ.

ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಘಟಕ, ಬಳ್ಳಾರಿ ಎಪಿಎಂಸಿ ವರ್ತಕರ ಸಂಘ, ಬಳ್ಳಾರಿ ದಲ್ಲಾಲಿ ವರ್ತಕರ ಸಂಘ, ರೈತ ಸಮೂಹಗಳು ಈ ಮೇಳಕ್ಕೆ ಸಹಕಾರ ನೀಡಿವೆ. ಈ ಮೇಳದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ರೈತರು ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಮೇಳದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾಗಿರುವ ಸೊಂತಾ ಗಿರಿಧರ್, ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾಗಿರುವ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಖಜಾಂಚಿಗಳಾಗಿರುವ ಸಿ.ಎಸ್. ಸತ್ಯನಾರಾಯಣ, ಮಾಜಿ ಅಧ್ಯಕ್ಷರುಗಳಾದ, ಸಿ. ಶ್ರೀನಿವಾಸ್, ಬಿ. ಮಹಾರುದ್ರಗೌಡ, ಈವೆಂಟ್ಸ್ ಕಮಿಟಿ ಚೇರ್ಮೆನ್ ನೇಕಾರ ನಾಗರಾಜ್,

ಪ್ರೆಸ್ ಅಂಡ್ ಮೀಡಿಯಾ ಕಮಿಟಿ ಚೇರ್ಮೆನ್ ತಾಟಕೂರಿ ಶ್ರೀನಿವಾಸರಾವ್, ಮ್ಯಾಗಜಿನ್ ಕಮಿಟಿಯ ಕೌಡಿಕಿ ಹನುಮೇಶಬಾಬು, ಕೆ.ಎಂ. ಭೋಗೇಶ್, ಜೆ. ರಾಜೇಶ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ನೀರಾವರಿ ಮತ್ತು ಪಶು ಸಂಗೋಪನಾ ಇಲಾಖೆ, ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘಜ ಬಳ್ಳಾರಿ ಜಿಲ್ಲಾ ಘಟಕ, ಬಳ್ಳಾರಿ ಎಪಿಎಂಸಿ ವರ್ತಕರ ಸಂಘ, ಬಳ್ಳಾರಿ ದಲ್ಲಾಲಿ ವರ್ತಕರ ಸಂಘ, ಕನ್ನಡ ನಾಡು ರೈತ ಸಂಘ, ಬಳ್ಳಾರಿ

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande