ಡಾ.ಎಲ್. ಬಸವರಾಜು ಪ್ರತಿಷ್ಠಾನ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಹಸ್ತಾಂತರ
ಡಾ.ಎಲ್. ಬಸವರಾಜು ಪ್ರತಿಷ್ಠಾನ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಹಸ್ತಾಂತರ
ಡಾ.ಎಲ್. ಬಸವರಾಜು ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ಕೋಲಾರದ ಆದಿಮ ಸಂಸ್ಥೆಗೆ ಹಸ್ತಾಂತರ ಮಾಡಲಾಯಿತು.


ಕೋಲಾರ, ಮೇ ೨೩ (ಹಿ.ಸ) :

ಆ್ಯಂಕರ್ : ಎಲೆಮರೆಯ ಕಾಯಂತೆ ಇರುವಂತ ಪ್ರತಿಭೆಗಳನ್ನು ಗುರುತಿಸಿ ಬೆಳಕಿಗೆ ತರುವ, ಅವರನ್ನು ಗೌರವಿಸುವ ಮೂಲಕ ಸಮಾಜ ಮುಖಿಗಳಾಗಿ ರೂಪುಗೊಳಿಸವ ಕೆಲಸವನ್ನು ಅದಿಮ ಸಾಂಸ್ಕೃತಿ ಕೇಂದ್ರವು ಕಳೆದ ೨೬ ವರ್ಷಗಳಿಂದ ನಿರಂತರವಾಗಿ ಮುಂದುವರೆಸಿಕೊ0ಡು ಬರುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಸಾಹಿತಿ ಡಾ.ಎಲ್. ಬಸವರಾಜು ಪ್ರತಿಷ್ಠಾನದ ಅಧ್ಯಕ್ಷ ಲಕ್ಷಿö್ಮÃನಾರಾಯಣ್ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಅದಿಮ ಸಾಂಸ್ಕೃತಿಕ ಕೇಂದ್ರದೊ0ದಿಗೆ ಡಾ.ಎಲ್. ಬಸವರಾಜು ಪ್ರತಿಷ್ಠಾನ ವತಿಯಿಂದ ಒಡಂಬಡಿಕೆ ಪತ್ರವನ್ನು ಹಸ್ತಾಂತರಿಸಿದ ಅವರು ಮಾತನಾಡಿ, ಕಳೆದ ೨೬ ವರ್ಷಗಳಿಂದ ಡಾ.ಎಲ್ ಬಸವರಾಜು ಪ್ರತಿಷ್ಠಾನದಲ್ಲಿ ಪ್ರತಿವರ್ಷ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರತಿವರ್ಷ ಎಲೆಮರೆಯ ಕಾಯಂತೆ ಸಮಾಜ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅವರಿಗೆ ಪ್ರಶಸ್ತಿಯೊಂದಿಗೆ ಗೌರವಿಸುವ ಸಂಪ್ರಾದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿತ್ತು ಎಂದು ನೆನಪಿಸಿದರು.

ಈ ಪ್ರತಿಷ್ಠಾನದಲ್ಲಿ ನಿವೃತ್ತ ಕನ್ನಡ ಉಪನ್ಯಾಸಕರಾದ ಚಂದ್ರ ಮೋಹನ್, ಚಂದ್ರಶೇಖರ್ ನಂಗಲಿ ಸೇರಿದಂತೆ ಅನೇಕ ಹಿರಿಯರು ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಠಾನವತಿಯಿಂದ ಎಲೆಮರೆಯ ಕಾಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿದ ನಂತರ ಸರ್ಕಾರವು ಅವರನ್ನು ಗುರುತಿಸಿ ಸನ್ಮಾನಿಸುತ್ತಿತ್ತು ಎಂದ ಅವರು ಮುಖವೀಣೆ ಆಂಜನಪ್ಪ ಸೇರಿದಂತೆ ಅನೇಕರ ಹೆಸರನ್ನು ಪ್ರಸ್ತಾಪಿಸಿದರು.

ನಾನು ನಾಮಾಕವಸ್ಥೆಗೆ ಮಾತ್ರ ಅಧ್ಯಕ್ಷನಾಗಿದ್ದು ಎಲ್ಲಾ ಕಾರ್ಯಕ್ರಮಗಳನ್ನು ನಮ್ಮ ಪದಾಧಿಕಾರಿಗಳೇ ಮಾಡುತ್ತಿದ್ದರು. ಎಲ್ಲರೂ ತಮ್ಮದೆ ಆದಾ ವೈಯುಕ್ತಿಕ ಖಾಸಗಿ ಕಾರ್ಯಕ್ರಮಗಳ ಒತ್ತಡದಿಂದಾಗಿ ಕಾರ್ಯಕ್ರಮ ರೂಪಿಸಿ ಮುಂದುವರೆಸಲು ಸಾಧ್ಯವಾದ ಕಾರಣಗಳಿಂದಾಗಿ ಈ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆ ಜವಾಬ್ದಾರಿಯನ್ನು ನೆಲಮೂಲದ ಜನಪ್ರಿಯ ಆದಿಮ ಸಾಂಸ್ಕೃತಿಕ ಕೇಂದ್ರಕ್ಕೆ ಹಸ್ತಾಂತರಿಸಿ ಮುಂದುವರೆಸಿಕೊAಡು ಹೋಗಲು ಒಡಂಬಡಿಕೆಯ ಪತ್ರವನ್ನು ಮಾಡಿಕೊಂಡು ಹಸ್ತಾಂತರಿಸಲಾಗುತ್ತಿದೆ. ಪ್ರತಿಷ್ಠಾನದಲ್ಲಿರುವ ೪.೫೧ ಲಕ್ಷ ರೂ ಗಳಲ್ಲಿ ಪ್ರತಿವರ್ಷ ಒಂದು ಕಾರ್ಯಕ್ರಮ ಮಾಡಲು ವಿಶಾಲಾಕ್ಷಿ ಡಾ.ಎಲ್.ಬಸವರಾಜು ಸಮ್ಮತಿಸಿದ್ದಾರೆ ಎಂದು ತಿಳಿಸಿದರು.

ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ, ಡಾ.ಎಲ್. ಬಸವರಾಜು ಪ್ರತಿಷ್ಠಾನ ಮತ್ತು ಆದಿಮ ಸಾಂಸ್ಕೃತಿಕ ಕೇಂದ್ರದ ಪದಾಧಿಕಾರಿಗಳು ಒಂದೇ ದೋಣಿಯ ಪದಾಧಿಕಾರಿಗಳು ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಡಾ.ಎಲ್.ಬಸವರಾಜು ಪ್ರತಿಷ್ಠಾನದ ಹೆಸರಿನಲ್ಲಿ ಕಾರ್ಯಕ್ರಮ ನಿರೂಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಅದರಂತೆ ಪ್ರತಿವರ್ಷ ಸಾಹಿತ್ಯ, ಕಲೆ ಮೂಲಕ ಸಮಾಜದಲ್ಲಿ ಬದಲಾವಣೆಯ ಶಕ್ತಿ ತುಂಬುವ ದೆಸೆಯಲ್ಲಿ ಸಾಹಿತಿಗಳು ಚಿಂತಕರು ಇರುವಂತ ಟ್ರಸ್ಟ್ ಮುಂದುವರೆಸಲು ವಿಶ್ವಾಸ ಹೊಂದಿ ಹೊಸದಾಗಿ ಜವಾಬ್ದಾರಿಯನ್ನು ವಹಿಸಿರುವುದನ್ನು ಪ್ರಮಾಣಿಕವಾಗಿ ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.

ಆದಿಮ ಸಾಂಸೃತಿಕ ಕೇಂದ್ರದ ಕಾರ್ಯದರ್ಶಿ ಹ.ಮಾ. ರಾಮಚಂದ್ರಪ್ಪ ಮಾತನಾಡಿ, ಆದಿಮ ಮತ್ತು ಡಾ.ಎಲ್.ಬಸವರಾಜು ಪ್ರತಿಷ್ಠಾನದ ಧ್ಯೇಯ ಉದ್ದೇಶಗಳು ಸಮಾಜಿಕ ಹೊಣೆಗಾರಿಕೆಗಳು ಒಂದೇ ಆಗಿವೆ. ಆದಿಮ ಸಾಂಸ್ಕೃತಿಕ ಕೇಂದ್ರದ ಚಟುವಟಿಕೆಯ ಒಂದು ಭಾಗವಾಗಿ ಪ್ರತಿಷ್ಠಾನದ ಧ್ಯೇಯ, ನಿಯಮಗಳನ್ನು ಪಾಲಿಸುವ ಮೂಲಕ ಕಾರ್ಯಕ್ರಮಗಳನ್ನು ಪ್ರಯೋಜಿಸಿ ಅದರ ಗೌರವಗಳನ್ನು ಉಳಿಸಿಕೊಂಡು ಹೋಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ಮೇ, ೩೧ರಂದು ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಬೆಂಗಳೂರಿನ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ ಜಂಟಿ ಆಶ್ರಯದಲ್ಲಿ ದೃಷ್ಟಿ ಚೇತನ ಕಾವ್ಯಯಾನ-೫ ವಿಶೇಷ ಕವಿಗೋಷ್ಠಿಯನ್ನು ಮದ್ಯಾಹ್ನ ೨-೩೦ಕ್ಕೆ ಹಮ್ಮಿಕೊಂಡಿದ್ದು, ಸಂಜೆ ೭ ಗಂಟೆಗೆ ೨೩೦ನೇ ಹುಣ್ಣಿಮೆ ಹಾಡು ಕಾರ್ಯಕ್ರಮವು ಮುಂದುವರೆಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಎಲೆಮರೆಯ ಕಾಯಂತಿರುವ ಪ್ರತಿಭೆಗಳನ್ನು ಬೆಳಕಿಗೆ ತಂದು ಗೌರವಿಸುವುದು ಉತ್ತಮ ಕೆಲಸವಾಗಿದೆ. ಆದಿಮ ಸಾಂಸ್ಕೃತಿಕ ಕೇಂದ್ರವು ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಹೆಸರು ಪಡೆದಿದ್ದು ಈ ಸಂಸ್ಥೆಯಲ್ಲಿ ಅನೇಕ ಪ್ರತಿಭೆಗಳು ವಿದೇಶ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿ ಉನ್ನತ ಸ್ಥಾನದಲ್ಲಿದೆ. ಇಂಥಹ ಸಂಸ್ಥೆಯೊAದಿಗೆ ಡಾ.ಎಲ್.ಬಸವರಾಜು ಪ್ರತಿಷ್ಠಾನ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿರುವುದು ಉತ್ತಮ ನಿರ್ಧಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಹೆಚ್.ಎ. ಪುರುಷೋತ್ತಮ್ ರಾವ್ ಪ್ರಾಸ್ತಾವಿಕ ನುಡಿಗಳಾಡಿ ಕಳೆದ ೨೦೦೧ರಲ್ಲಿ ಡಾ.ಎಲ್.ಬಸವರಾಜ್ ಅವರಿಗೆ ಪಂಪ ಪ್ರಶಸ್ತಿ ಬಂದ ನಂತರದಲ್ಲಿ ಈ ಟ್ರಸ್ಟ ರಚಿಸಲಾಗಿದೆ. ಅವರು ನೀಡಿರುವ ದತ್ತಿನಿಧಿಯಿಂದ ಪ್ರತಿವರ್ಷ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಪ್ರಶಸ್ತಿಯೊಂದಿಗೆ ಗೌರವಿಸುವ ಕೆಲಸವನ್ನು ನಿರ್ವಹಿಸಿಕೊಂಡು ಬರಲಾಗುತ್ತಿತ್ತು. ೨೬ ವರ್ಷಗಳ ಸುದೀರ್ಘಕಾಲದ ಸೇವೆಯಿಂದ ಅನೇಕ ಹಿರಿಯರು ಧಣಿದಿದ್ದು ಈಗಾ ಸುಧಾರಿಸಿ ಕೊಳ್ಳಲು ಆದಿಮ ಸಾಂಸ್ಕೃತಿಕ ಕೇಂದ್ರದೊAದಿಗೆ ಒಡಂಬಡಿಕೆ ಮಾಡಿಕೊಂಡು ಅದರ ಜವಾಬ್ದಾರಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧೀಕ್ಷಕ ಹೇಮರೆಡ್ಡಿ, ಉಪನ್ಯಾಸಕರಾದ ಕಾಳಿದಾಸ, ರಮೇಶ್ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande