ಪತ್ರಕರ್ತ ಮೆಣಸಿನ ರಮೇಶ್ ನಿಧನ
ಅವ ರು
ಪತ್ರಕರ್ತ ಮೆಣಸಿನ ರಮೇಶ್ ನಿಧನ


ಬಳ್ಳಾರಿ, 23 ಮೇ (ಹಿ.ಸ.) :

ಆ್ಯಂಕರ್ : ಪತ್ರಕರ್ತ ಮೆಣಸಿನ ರಮೇಶ್ (48) ಅವರು ಕಡಿಮೆ ರಕ್ತದ ಒತ್ತಡದ ಕಾರಣ ತೀವ್ರ ಹೃದಯಾಘಾತವಾಗಿ ಶುಕ್ರವಾರ ರಾತ್ರಿ ನಿಧನರಾಗಿದ್ದು, ಸಿಡಗಿನಮೊಳ ಗ್ರಾಮದ ರುದ್ರಭೂಮಿಯಲ್ಲಿ ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ಶುಕ್ರವಾರ ರಾತ್ರಿ ಏಕಾಏಕಿ ರಕ್ತದೊತ್ತಡವು ಕುಸಿತು, ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಗುರು ಹಿರಿಯರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಸಿಡಗಿನಮೊಳ ಗ್ರಾಮದ ರುದ್ರಭೂಮಿಯಲ್ಲಿ ಶನಿವಾರ ಮಧ್ಯಾಹ್ನ 1.30ರ ನಂತರ ನೆರವೇರಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೃತರು ಲೋಕದರ್ಶನ ಮತ್ತು ವಿವಿಧ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು.

ವಿವರಗಳಿಗಾಗಿ : 94485 93089 ಮತ್ತು 6360344569 ಗೆ ಸಂಪರ್ಕಿಸಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande