ಗಂಗಾವತಿ : ಮೇ 24 ಮತ್ತು 25 - ಉಚಿತ ಆರೋಗ್ಯ ತಪಾಸಣೆ ಶಿಬಿರ
ಗಂಗಾವತಿ, 23 ಮೇ (ಹಿ.ಸ.) : ಆ್ಯಂಕರ್ : ಡಾ.ಆರ್.ಬಿ.ಪಾಟೀಲ್ ಪೌಂಡೇಷನ್, ಗಂಗಾವತಿ, ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್, ಗಂಗಾವತಿ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ತಜ್ಞ ವೈದ್ಯರಿಂದ ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಮೇ 24 ಮತ್ತು 2
ಗಂಗಾವತಿ : ಮೇ.24 ಮತ್ತು 25 - ಉಚಿತ ಆರೋಗ್ಯ ತಪಾಸಣೆ ಶಿಬಿರ


ಗಂಗಾವತಿ, 23 ಮೇ (ಹಿ.ಸ.) :

ಆ್ಯಂಕರ್ : ಡಾ.ಆರ್.ಬಿ.ಪಾಟೀಲ್ ಪೌಂಡೇಷನ್, ಗಂಗಾವತಿ, ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್, ಗಂಗಾವತಿ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ತಜ್ಞ ವೈದ್ಯರಿಂದ ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಮೇ 24 ಮತ್ತು 25 ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ಹೃದ್ರೋಗ, ಕ್ಯಾನ್ಸರ್, ಕಿಡ್ನಿ ಸ್ಟೋನ್ ಸೇರಿ ಇತರೆ ಕಾಯಿಲೆಗಳ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಡಾ. ಆರ್.ಬಿ. ಪಾಟೀಲ್ ಫೌಂಡೇಷನ್ ಅಧ್ಯಕ್ಷ ಆರ್.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.

ಸುದ್ದಿಗಾರರಿಗೆ ಈ ಕುರಿತು ತಿಳಿಸಿದ ಅವರು, ಸ್ತನ ಕ್ಯಾನ್ಸರ್, ಅಪಂಡಿಸೈಟಿಸ್, ಮಕ್ಕಳ ರೋಗ, ಸ್ತ್ರಿ ರೋಗ, ಪ್ರಸೂತಿ, ಎಲುಬು - ಕೀಲು, ನರರೋಗ, ಬೆನ್ನು ನೋವು, ಕುತ್ತಿಗೆ ನೋವು, ಕಿವಿ ಮೂಗು ಗಂಟಲು ತೊಂದರೆ, ಕಣ್ಣಿನ ತಪಾಸಣೆ, ಮೆದುಳಿನ ಗಡ್ಡೆ, ಬಿಪಿ ಶುಗರ್ ಸೇರಿ ಮೂವತ್ತಕ್ಕೂ ಹೆಚ್ಚಿನ ಆರೋಗ್ಯ ಸಮಸ್ಯೆಗಳ ಉಚಿತ ತಪಾಸಣೆ ನೆಡೆಸಲಾಗುತ್ತದೆ.

ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನಸೇವಾ ಕಲಾ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ನಾಗರಾಜ್ ಇಂಗಳಗಿ ಅವರು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಂಘ ರಾಜ್ಯ ಘಟಕ ಗಂಗಾವತಿ ಹಾಗು ವಿಐಪಿ ಮೆಲೋಡಿಸ್ ಗಂಗಾವತಿ ಸಹಕಾರ ನೀಡಿದ್ದು, ಆರ್ಥಿಕವಾಗಿ ಹಿಂದುಳಿದ ಜನರು ಖಾಸಗಿ ಆಸ್ಪತ್ರೆಗಳ ಶುಲ್ಕಕ್ಕೆ ಹೆದರಿ ತಪಾಸಣೆ ನಡೆಸದೆ ರೋಗ ಉಲ್ಬಣಕ್ಕೆ ಕಾರಣರಾಗುತ್ತಿದೆ.

ಈ ಶಿಬಿರವು ಅನೇಕರಿಗೆ ನೆರವಾಗಲಿದೆ. ಶಿಬಿರವನ್ನು ಸುಳೆಕಲ್ನ ಭುವನೇಶ್ವರಯ್ಯ ಶ್ರೀಗಳು ಉದ್ಘಾಟಿಸುತ್ತಿದ್ದು, ದಿವ್ಯ ಸಾನಿಧ್ಯವನ್ನು ಅರಳಹಳ್ಳಿಯ ಶ್ರೀ ಗವಿಸಿದ್ದೇಶ್ವರ ಶ್ರೀಗಳು,

ಜಾಮಿಯ ಮಜೀದ್ ಗುರುಗಳಾದ ಮೌಲಾನಾ ಕಮಾಲ್ ಪಾಶಾ ನಕ್ಷಬಂದಿ ಅಲ್ ಖಾದ್ರಿ ಸಾಬ್ ಅವರು ಅಧ್ಯಕ್ಷತೆ ವಹಿಸುವರು.

ಗಂಗಾವತಿಯ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಸಂಸದರಾದ ಶಿವರಾಮಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್. ಶ್ರೀನಾಥ್, ಶ್ರೀ ಭಗೀರಥ ಉಪ್ಪಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಪ್ಪ ಅಮರಜ್ಯೋತಿ, ವೈದ್ಯಾಧಿಕಾರಿ ಈಶ್ವರ ಸವಡಿ, ಗಂಗಾವತಿ ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ವೆಂಕಟೇಶ್ ಅಮರಜ್ಯೋತಿ, ಡಾ. ಆರ್.ಬಿ. ಪಾಟೀಲ್ ಪೌಂಡೇಷನ್ ಅಧ್ಯಕ್ಷ ಡಾ.ಆರ್.ಬಿ. ಪಾಟೀಲ್ ಪಾಲ್ಗೊಳ್ಳುವರು ಎಂದರು.

ಕರ್ನಾಟಕ ರಾಜ್ಯ ಕಟ್ಟಡ ಹಾಗು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ರಾಜ್ಯಧ್ಯಕ್ಷ ಶಿವಕುಮಾರ್ ಗೌಡ, ಕಾರ್ಮಿಕ ಮುಖಂಡ ರಾಮು ಹಂಚಿನಾಳ್ ಹಾಗು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಗೋಪಾಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande