
ಶಿವಮೊಗ್ಗ, 23 ಮೇ (ಹಿ.ಸ.) :
ಆ್ಯಂಕರ್ : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಭಾರತೀಯ ಸೇನೆ ಹಾಗೂ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿಗಳ ನಡುವಿನ 2026-27ರಿಂದ 2030-31 ರವರೆಗಿನ 5 ಶೈಕ್ಷಣಿಕ ವರ್ಷಗಳ ಒಡಂಬಡಿಕೆಯ ಮೇರೆಗೆ ಸೈನಿಕ, ಮಾಜಿ ಸೈನಿಕ ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ, ಭುವನೇಶ್ವರ, ಒಡಿಶಾ ವಿದ್ಯಾ ಸಂಸ್ಥೆಯು ತಾಂತ್ರಿಕ ಮತ್ತು ವೈದ್ಯಕೀಯ ಸ್ನಾತಕ ಪದವಿ ವಿದ್ಯಾಭ್ಯಾಸಕ್ಕಾಗಿ ಅವಕಾಶ ಒದಗಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಟ್ಯೂಷನ್ ಫೀ ಯಲ್ಲಿ 10 ಪ್ರತಿಶತ ವಿದ್ಯಾರ್ಥಿವೇತನದೊಂದಿಗೆ 2- ವೈದ್ಯಕೀಯ, 5 ದಂತ ವೈದ್ಯಕೀಯ ಹಾಗೂ 5 ಬಿ.ಎಸ್ಸಿ. ನರ್ಸಿಂಗ್ ಸೀಟುಗಳನ್ನು ಕಾಯ್ದಿರಿಸಿದೆ.
ಟ್ಯೂಸನ್ ಫೀಯಲ್ಲಿ 50 ಪ್ರತಿಶತ ವಿದ್ಯಾರ್ಥಿವೇತನದೊಂದಿಗೆ 4 ಕಂಪ್ಯೂಟರ್ ಸೈನ್ಸ್ ಮತ್ತು ಇದಕ್ಕೆ ಸಂಬಂಧಿತ ಪ್ರೋಗ್ರಾಂಗಳು ಹಾಗೂ ವೈದ್ಯಕೀಯ ವಿಭಾಗದ ಹೊರತುಪಡಿಸಿ ಕೆ.ಐ.ಐ.ಟಿ. ಸಂಸ್ಥೆಯಲ್ಲಿ ಲಭ್ಯ ಹಾಗೂ ಇತರೆ ಶಿಕ್ಷಣಗಳಿಗೆ ಎಷ್ಟು ಸಂಖ್ಯೆಯಲ್ಲಿಯಾದರೂ ಅರ್ಜಿ ಸಲ್ಲಿಸಬಹುದಾಗಿದೆ.
ಸೈನಿಕ/ಮಾಜಿ ಸೈನಿಕರ ಅವಲಂಬಿತರಿಂದ ವೈದ್ಯಕೀಯ/ ದಂತ ವೈದ್ಯಕೀಯ ಮತ್ತು ತಾಂತ್ರಿಕ ವಿದ್ಯಾಭ್ಯಾಸಗಳಿಗೆ ಎಷ್ಟು ಅರ್ಜಿಗಳು ಸ್ವೀಕೃತಗೊಳ್ಳುತ್ತವೆಯೆಂಬುದರ ಮೇರೆಗೆ ಯುದ್ಧ/ಯುದ್ಧದಂತಹ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರ ಅವಲಂಬಿತರುಗಳಿಗೆ ಟ್ಯೂಷನ್ ಫೀಯಲ್ಲಿ ಗರಿಷ್ಠ 5 ಸೀಟುಗಳಿಗೆ 100 ಪ್ರತಿಶತ ವಿನಾಯಿತಿ ನೀಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ kiit.ac.in ನ್ನು ಸಂಪರ್ಕಿಸುವಂತೆ ಇಲಾಖೆಯ ಉಪನಿರ್ದೇಶಕರಾದ ಡಾ. ಸಿ.ಎ. ಹಿರೇಮಠ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.