ಬಸಾಪುರ ಕೆರೆ ಮಾರಾಟ ವಿರೋಧಿಸಿ ಹೋರಾಟ : ಪೂಜಾರ
ಕೊಪ್ಪಳ, 22 ಮೇ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರ ಸಮೀಪದ ಬಸಾಪುರ ಕೆರೆಯನ್ನು ಪರಂಪೆÇೀಕ, ಬಂಜರು ಭೂಮಿ ಎನ್ನುವ ಕತೆ ಕಟ್ಟಿ 33 ಲಕ್ಷಕ್ಕೆ ನಾಮಕಾವಾಸ್ತೆ ಷರತ್ತು ವಿಧಿಸಿ, 30 ವರ್ಷ ಕಳೆದ ಮೇಲೆ ಸರ್ಕಾರದ ಗಮನಕ್ಕೆ ತಂದು ಪರಭಾರೆ ಮಾಡಬಹುದು ಎಂದರೆ ಏನರ್ಥ ಎಂದು ಕೃಷಿ ಬೆಲೆ ಆಯೋಗದ ಸದಸ್ಯರು, ಸಿಪಿಐ
We are fighting against the sale of Basapura Lake: Pujara


We are fighting against the sale of Basapura Lake: Pujara


We are fighting against the sale of Basapura Lake: Pujara


ಕೊಪ್ಪಳ, 22 ಮೇ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರ ಸಮೀಪದ ಬಸಾಪುರ ಕೆರೆಯನ್ನು ಪರಂಪೆÇೀಕ, ಬಂಜರು ಭೂಮಿ ಎನ್ನುವ ಕತೆ ಕಟ್ಟಿ 33 ಲಕ್ಷಕ್ಕೆ ನಾಮಕಾವಾಸ್ತೆ ಷರತ್ತು ವಿಧಿಸಿ, 30 ವರ್ಷ ಕಳೆದ ಮೇಲೆ ಸರ್ಕಾರದ ಗಮನಕ್ಕೆ ತಂದು ಪರಭಾರೆ ಮಾಡಬಹುದು ಎಂದರೆ ಏನರ್ಥ ಎಂದು ಕೃಷಿ ಬೆಲೆ ಆಯೋಗದ ಸದಸ್ಯರು, ಸಿಪಿಐ (ಎಂಎಲ್) ಮಾಸ್ ಲೈನ್ ಪಕ್ಷದ ರಾಜ್ಯಕಾರ್ಯದರ್ಶಿ ಡಿ.ಎಚ್. ಪೂಜಾರ ಅವರು ತಿಳಿಸಿದ್ದಾರೆ.

18ನೇ ದಿನದಲ್ಲಿ ಮುಂದುವರಿದ ಧರಣಿಗೆ ಬೆಂಬಲಿಸಿ ಸರ್ಕಾರದ ನಡೆಯನ್ನು ಪ್ರಶ್ನಿಸಿದರು. ಇಲ್ಲಿ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ದನಕರುಗಳನ್ನು ರೈತರು ಸಾಕುತ್ತಾರೆ. ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಬಲ್ಡೋಟ ಅತಿಕ್ರಮಿಸಿರುವ ಬಸಾಪುರ ಕೆರೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎನ್ನುವ ಧರಣಿಯಲ್ಲಿ ಮಾತನಾಡಿದರು.

ಜಾನುವಾರು ಮತ್ತು ಕುರಿಗಳು ಬೇಸಿಗೆ ಬಿರುಬಿಸಿಲಿನಲ್ಲಿ ಗೋಗರೆದರೂ ಕನಿಕರವಿಲ್ಲದ ಬಲ್ಡೋಟ ಕಾರ್ಖಾನೆ ನೀರು ಕುಡಿಸಲು ಬಿಡದೆ ನಗರದಲ್ಲಿ ಶುದ್ಧ ನೀರಿನ ಘಟಕ ಹಂಚಿಕೆ ಮಾಡುತ್ತ ಪಾಪ ಕಳೆದುಕೊಳ್ಳಲು ಮುಂದಾಗಿದೆ. ಕೂಡುವ ಸಿಮೆಂಟ್ ಬೆಂಚ್, ಹಸಿರು ಹೆಸರಿನಲ್ಲಿ ಟ್ರೀಗಾರ್ಡ್ ಇಟ್ಟು ಜನರನ್ನು ಯ್ಯಾಮಾರಿಸಲು ಸಾಧ್ಯವಿಲ್ಲ ಎಂದರು.

ಜಿಲ್ಲಾಧಿಕಾರಿಗಳು ಇದುವರೆಗೆ ಕೆರೆ ತೆರವು ಮಾಡಿ ಕೊಡದೆ ಇರುವುದು ಸುತ್ತಲಿನ ಜನ, ಜಾನುವಾರುಗಳು ಪರಿತಪಿಸುವಂತಾಗಿದೆ ಎಂದರು.

ಧರಣಿಯಲ್ಲಿ ಭೀಮಸೇನ ಕಲಕೇರಿ, ಬಸವರಾಜ ಪೂಜಾರ ನರೇಗಲ್, ರೈತ ಮುಖಂಡಯಂಕಪ್ಪ ಬಿಸರಳ್ಳಿ ಕಾಸನಕಂಡಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹನುಮಂತ ತಳವಾರ ಬಸಾಪುರ, ನಾಗಪ್ಪ ಗೋಡೆಕಾರ ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande