
ಕೋಲಾರ, ೨೨ ಮೇ (ಹಿ.ಸ) :
ಆ್ಯಂಕರ್ : ಕೋಲಾರ ತಾಲೂಕಿನ ಅರಳಿಮರದ ಹೊಸಹಳ್ಳಿ ಗ್ರಾಮದ ನಿವಾಸಿ ಕಲಾವತಿ ಅವರ ಮನೆ ಹತ್ತಿರ ಸುಮಾರು ವರ್ಷಗಳಿಂದ ರಸ್ತೆ ಬದಿಯಲ್ಲಿ ಮರಗಳು ಒಣಗಿಹೋಗಿವೆ. ಮರಗಳನ್ನು ತೆರವುಗೊಳಿಸುವಂತೆ ಸಂಬ0ಧಪಟ್ಟ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮ ಪಂಚಾಯತಿಗೂ ಸಹ ಮನವಿ ಸಲ್ಲಿಸಲಾಗಿತ್ತು. ಆದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಗುರುವಾರರಂದು ಸಂಜೆ ೩-೦೦ ಗಂಟೆಗೆ ಸುರಿದ ಜೋರು ಮಳೆ ಮತ್ತು ವಿಪರೀತ ಗಾಳಿಗೆ ಮರದ ಕೊಂಬೆಗಳು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಕಂಬ ಸಹ ಮನೆ ಮತ್ತು ರ್ಸತೆ ತಪ್ಪಿಸಿ ಪಕ್ಕಕ್ಕೆ ಉರುಳಿದ ಕಾರಣ ಬಾರಿ ಅನಾಹುತದಿಂದ ತಪ್ಪಿಸಿಕೊಳ್ಳಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುಂಚೆ ಮರದ ರೆಂಬೆಗಳು ಮುರಿದು ಕಲಾವತಿ ಆದ ನನ್ನ ತಲೆ ಮೇಲೆ ಬಿದ್ದ ಪರಿಣಾಮ ಕೋಲಾರದ ಮಾರುತಿ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆದು ೪ ಹೊಲಿಗೆ ಸಹ ಹಾಕಿಸಿಕೊಂಡಿರುತ್ತೇನೆ. ಆ ಕೂಡಲೇ ಅರಣ್ಯ ಇಲಾಖೆಗೂ ಸಹ ಮನವಿ ಸಲ್ಲಿಸಿದ್ದೇನೆ. ಸಂಬAಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ವಹಿಸಿಲ್ಲ ಎಂದು ಆರೋಪಿಸಿದ್ದಾರೆ.
ಗುರುವಾರರಂದು ಬಾರಿ ಮಳೆ ಮತ್ತು ಗಾಳಿಗೆ ಒಣಗಿದ ಮರದ ಕೊಂಬೆಗಳು ನಮ್ಮ ಮನೆಯ ಬಳಿ ಇರುವ ವಿದ್ಯುತ್ ತಂತಿಯ ಮೇಲೆ ಬಿದ್ದು ಕಂಬ ನೆಲಕ್ಕುರಿಳಿರುತ್ತದೆ. ಒಂದು ವೇಳೆ ಆಯಾ ತಪ್ಪಿ ಮನೆಯ ಮೇಲೆ ಬಿದ್ದಿದ್ದರೆ ಮನೆಯಲ್ಲಿದ್ದ ಜಾನುವಾರುಗಳು ಮತ್ತು ಕುಟುಂಬದವರ ಪರಿಸ್ಥಿತಿ ಊಹಿಸಿಕೊಳ್ಳಲು ಕಷ್ಟವಾಗಿದೆ. ಈ ಕೂಡಲೇ ಒಣಗಿದ ಮರಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು ಇಲ್ಲವಾದ ಪಕ್ಷದಲ್ಲಿ ನಮಗೆ ಯಾವುದೇ ತೊಂದರೆ ಸಂಭವಿಸಿದರೆ ಅದಕ್ಕೆ ಅರಣ್ಯ ಇಲಾಖೆ ಮತ್ತು ಕೆ.ಇ.ಬಿ ಅಧಿಕಾರಿಗಳೇ ಕಾರಣ ಎಂದು ಕಲಾವತಿ ಕೆ.ಪಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್