ಶಿವರಾಜ್ ಅವರ `ಗಾಮಿನಿ' ಕಾದಂಬರಿ ಬಿಡುಗಡೆ
ಮರಿಯಮ್ಮನಹಳ್ಳಿ, 22 ಮೇ (ಹಿ.ಸ.) : ಆ್ಯಂಕರ್ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮೆಡಿಕಲ್ ವಲಯದ ಜಿ. ಎಲ್. ಶಿವರಾಜ್ ಅವರ ಗಾಮಿನಿ ಕಾದಂಬರಿಯನ್ನು ಕಾಲೇಜಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ
ಶಿವರಾಜ್ ಅವರ  `ಗಾಮಿನಿ' ಕಾದಂಬರಿ ಬಿಡುಗಡೆ


ಶಿವರಾಜ್ ಅವರ  `ಗಾಮಿನಿ' ಕಾದಂಬರಿ ಬಿಡುಗಡೆ


ಮರಿಯಮ್ಮನಹಳ್ಳಿ, 22 ಮೇ (ಹಿ.ಸ.) :

ಆ್ಯಂಕರ್ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮೆಡಿಕಲ್ ವಲಯದ ಜಿ. ಎಲ್. ಶಿವರಾಜ್ ಅವರ ಗಾಮಿನಿ ಕಾದಂಬರಿಯನ್ನು ಕಾಲೇಜಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತೆ ಬಿ.ಮಂಜಮ್ಮ ಜೋಗತಿ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಡಾ.ಕೆ. ನಾಗರತ್ನಮ್ಮ, ಹೆಡ್ ಕಾನ್ಸ್ಟೇಬಲ್ ಸ್ವರೂಪನಂದ, ಕನ್ನಡ ಪಂಡಿತ್ ಲಕ್ಷ್ಮಿದೇವಿ ಕರಣಂ, ಪ್ರಾಂಶುಪಾಲರಾದ ಡಾ. ರೂಪಾ ಪಿ. ಸಿ.ಕಾದಂಬರಿ ಬಿಡುಗಡೆಗೊಳಿಸಿದರು.ಮೇಘನಾ ಪ್ರಕಾಶನದ ಮುಖ್ಯಸ್ಥೆ ಮೇಘಾ, ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಮಾತೆ ಮಂಜಮ್ಮ ಜೋಗತಿ, ಸಾಹಿತ್ಯದತ್ತ ಮೆಡಿಕಲ್ ವಲಯದ ಜಿ. ಎಲ್. ಶಿವರಾಜ್ ಅವರ ಕನ್ನಡ ಸಾಹಿತ್ಯದ ಬಗೆಗಿನ ಅಪಾರ ಒಲವು ಅವರನ್ನು ಕಾದಂಬರಿ ಬರೆಯುವಂತೆ ಮಾಡಿದೆ. ಸಾಮಾನ್ಯವಾಗಿ ಸಾಹಿತ್ಯದ ವಿದ್ಯಾರ್ಥಿಗಳು ಕವನ, ಚುಟುಕು ಹನಿಗವನ ಬರೆಯಲು ಆಸಕ್ತಿ ವಹಿಸುತ್ತಾರೆ. ಆದರೆ ಜಿ. ಎಲ್. ಶಿವರಾಜ್ ಅವರ ಮೊದಲ ಬಾರಿಗೆ ಗಾಮಿನಿ ಕಾದಂಬರಿಯನ್ನು ಬರೆದು ಆಶ್ಚರ್ಯ ಹುಟ್ಟಿಸಿದ್ದಾನೆ. ಭವಿಷ್ಯದಲ್ಲಿ ಇನ್ನಷ್ಟು ಸಾಹಿತ್ಯವನ್ನು ಸೃಷ್ಟಿಸಲಿ ಎಂದು ಆಶಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರೂಪ ಪಿ. ಸಿ.ಅದ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಆರ್. ಪಿ. ವಿನಾಯಕ, ವಕೀಲರಾದ ಸಿ. ಆರ್. ಶ್ರೀನಿವಾಸ್, ಮುಂತಾದವರು ಕಾದಂಬರಿಯ ಮೊದಲ ಪ್ರತಿಯನ್ನು ಸ್ವಿಕರಿಸಿ ಶುಭಹಾರೖಸಿದರು

ಡಾ. ಕೆ. ನಾಗರತ್ನಮ್ಮ, ಲಕ್ಷ್ಮಿದೇವಿ ಕರಣಂ,ನಾಗರಹುಣಿಸೆ ಮೇಘನಾ ಪ್ರಕಾಶನದ ಮುಖ್ಯಸ್ಥೆ ಜಿ ಎಲ್ ಮೇಘಾ,ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಮಾಜಿ ಜಿಪಂ ಸದಸ್ಯ ಗೋವಿಂದರ ಪರಶುರಾಮ್, ಈಶ್ವರ್ ಮದರಕಲ್, ಸೋಮಪ್ಪ,ಗ್ಯಾರಂಟಿ ಸಮಿತಿ ಕುರಿ ಶಿವಮೂರ್ತಿ, ಆದಿಮನೆ ಹುಸೇನ್ ಬಾಷಾ, ಚಿದ್ರಿ ಸತೀಶ್, ಗುಂಡದ ಸೋಮಣ್ಣ, ಸ್ನೇಹ,ಉಪನ್ಯಾಸಕ ಎರ್ರೀಸ್ವಾಮಿ,ಸೇರಿದಂತೆ ಇತರರು ಇದ್ದರು.ಯುವ ಕವಿ ಜಿ. ಎಲ್.ಶಿವರಾಜ್ ಸ್ವಾಗತಿಸಿದರು, ಜಿ. ಎಲ್.ಮೇಘಾ ವಂದಿಸಿದರು, ರವಿಚಂದ್ರ ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande