ರಾಜಾ ರಾಮ್ ಮೋಹನ್ ರಾಯ್ ಜಯಂತಿ ; ಡಿ.ಕೆ. ಶಿವಕುಮಾರ್ ನಮನ
ಬೆಂಗಳೂರು, 22 ಮೇ (ಹಿ.ಸ.) : ಆ್ಯಂಕರ್ : ದಾರ್ಶನಿಕ ಹಾಗೂ ಸಾಮಾಜಿಕ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೌರವ ನಮನ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, “ಸತಿ ಪದ್ಧತಿಯ ವ
Dks post


ಬೆಂಗಳೂರು, 22 ಮೇ (ಹಿ.ಸ.) :

ಆ್ಯಂಕರ್ : ದಾರ್ಶನಿಕ ಹಾಗೂ ಸಾಮಾಜಿಕ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೌರವ ನಮನ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, “ಸತಿ ಪದ್ಧತಿಯ ವಿರುದ್ಧ ರಾಜಾ ರಾಮ್ ಮೋಹನ್ ರಾಯ್ ನಡೆಸಿದ ಅವಿರತ ಹೋರಾಟ, ಮಹಿಳಾ ಹಕ್ಕುಗಳ ಪರ ಅವರ ಬದ್ಧತೆ ಹಾಗೂ ಆಧುನಿಕ ಶಿಕ್ಷಣಕ್ಕಾಗಿ ಮಾಡಿದ ಪ್ರಬಲ ವಾದಗಳು ಭಾರತವನ್ನು ಹೆಚ್ಚು ಪ್ರಗತಿಪರ ಮತ್ತು ಪ್ರಬುದ್ಧ ರಾಷ್ಟ್ರವಾಗಿಸಲು ಅಡಿಪಾಯ ಹಾಕಿದವು” ಎಂದು ಹೇಳಿದ್ದಾರೆ.

“ಸಮಾನತೆ ಮತ್ತು ಸಾಮಾಜಿಕ ಸುಧಾರಣೆಯತ್ತ ಭಾರತದ ಪಯಣದಲ್ಲಿ ಅವರ ಕೊಡುಗೆಗಳು ಇಂದಿಗೂ ಮಾರ್ಗದರ್ಶಕ ಶಕ್ತಿಯಾಗಿ ಉಳಿದಿವೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಭಾರತೀಯ ಸಮಾಜದಲ್ಲಿ ಅಂಧಶ್ರದ್ಧೆ, ಅಸಮಾನತೆ ಮತ್ತು ಸಾಮಾಜಿಕ ಕಟ್ಟುಪಾಡುಗಳ ವಿರುದ್ಧ ಹೋರಾಡಿದ ರಾಜಾ ರಾಮ್ ಮೋಹನ್ ರಾಯ್ ಅವರನ್ನು ಆಧುನಿಕ ಭಾರತದ ಪ್ರಮುಖ ಸುಧಾರಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande