
ಧಾರವಾಡ, 22 ಮೇ (ಹಿ.ಸ.) :
ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಧಾರವಾಡ ಜಿಲ್ಲೆಯ ಐದು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ 2025-26 ನೇ ಸಾಲಿಗೆ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ವೀಕೃತಗೊಂಡ ಅರ್ಜಿಗಳನ್ನು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಆಯ್ಕೆ ಸಮಿತಿಯ ಸಭೆಯಲ್ಲಿ ನಿಯಮಾನುಸಾರ ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ತಾಲೂಕುವಾರು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಧಾರವಾಡ ಕಚೇರಿ ಹಾಗೂ ಸಂಬಂಧಿತ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ನಾಮಫಲಕದಲ್ಲಿ ಮೇ 22, 2026 ರಂದು ಪ್ರಕಟಿಸಲಾಗಿದೆ.
ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅಭ್ಯರ್ಥಿಗಳು ಪ್ರಕಟಣೆಯ ದಿನಾಂಕದಿಂದ 7 ಕೆಲಸದ ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಮೇ 22, 2026 ರಿಂದ ಜೂನ್ 1, 2026 ರ ಸಂಜೆ 5:30 ಗಂಟೆಯೊಳಗೆ ಸಂಬಂಧಿತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಆಕ್ಷೇಪಣೆ ಸಲ್ಲಿಸಬಹುದು.
ತಾತ್ಕಾಲಿಕ ಆಯ್ಕೆ ಪಟ್ಟಿ ವೀಕ್ಷಣೆ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಸಂಪರ್ಕಿಸಬಹುದಾದ ಕಚೇರಿಗಳು:
ಧಾರವಾಡ ಶಿವಾಜಿ ಸರ್ಕಲ್ ಹತ್ತಿರ, ಹಳೇ ಎ.ಪಿ.ಎಂ.ಸಿ., ಹಂಚಿನಮನಿ ಕಾಂಪ್ಲೆಕ್ಸ್, ಶಿಶು ಅಭಿವೃದ್ಧಿ ಯೋಜನೆ ಧಾರವಾಡ (ಗ್ರಾಮೀಣ) ದೂರವಾಣಿ: 7892032894, ಹುಬ್ಬಳ್ಳಿ ಉಣಕಲ್, ಉಣಕಲ್ ಕ್ರಾಸ್, ಅಂಬೇಡ್ಕರ ಭವನ ಹತ್ತಿರ, ಸ್ತ್ರೀ ಶಕ್ತಿ ಭವನ, ಶಿಶು ಅಭಿವೃದ್ಧಿ ಯೋಜನೆ ಹುಬ್ಬಳ್ಳಿ (ಗ್ರಾಮೀಣ) ದೂರವಾಣಿ: 9480410052, ಕಲಘಟಗಿ ಹಳಿಯಾಳ ರಸ್ತೆ, ಸ್ತ್ರೀ ಶಕ್ತಿ ಭವನ, ಶಿಶು ಅಭಿವೃದ್ಧಿ ಯೋಜನೆ ಕಲಘಟಗಿ ದೂರವಾಣಿ: 7204383740, ಕುಂದಗೋಳ ಮಾರ್ಕೆಟ್ ರೋಡ್,ವಿವಿಧ ಸರ್ಕಾರಿ ಇಲಾಖೆಗಳ ಸಂಕೀರ್ಣ, ಶಿಶು ಅಭಿವೃದ್ಧಿ ಯೋಜನೆ ಕುಂದಗೋಳ ದೂರವಾಣಿ: 9035944146, ನವಲಗುಂದ ಎಚ್.ಪಿ. ಪೆಟ್ರೋಲಿಯಂ ಬಂಕ್ ಹತ್ತಿರ, ಹೆಬಸೂರ ಪ್ಲಾಟ್, ಸ್ತ್ರೀಶಕ್ತಿ ಭವನ, ಶಿಶು ಅಭಿವೃದ್ಧಿ ಯೋಜನೆ ನವಲಗುಂದ ದೂರವಾಣಿ: 9844482781 ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್.ಕುಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.