ಕೊಪ್ಪಳ : 204ನೇ ದಿನದಲ್ಲಿ ಬಲ್ಡೋಟ ತೊಲಗಿಸಿ ಧರಣಿ
ಕೊಪ್ಪಳ, 22 ಮೇ (ಹಿ.ಸ.) : ಆ್ಯಂಕರ್ : ನಗರಸಭೆ ಆವರಣದ ಬಲ್ಡೋಟ ಹಟಾವೋ ಕೊಪ್ಪಳ-ಭಾಗ್ಯನಗರ ಬಚಾವೋ 204ನೇ ದಿನದ ಧರಣಿ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳು ಕೋರಿದ ಕಾನೂನು ಅಭಿಪ್ರಾಯ ಅತಿ ಶೀಘ್ರವಾಗಿ ಒದಗಿಸಿಕೊಡಲು ತೀರ್ಮಾನಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ.ಕಣವಿ ಇದರ ಜವಾಬ್ದಾರಿ
Protest to remove Baldota continues on 204th day


ಕೊಪ್ಪಳ, 22 ಮೇ (ಹಿ.ಸ.) :

ಆ್ಯಂಕರ್ : ನಗರಸಭೆ ಆವರಣದ ಬಲ್ಡೋಟ ಹಟಾವೋ ಕೊಪ್ಪಳ-ಭಾಗ್ಯನಗರ ಬಚಾವೋ 204ನೇ ದಿನದ ಧರಣಿ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳು ಕೋರಿದ ಕಾನೂನು ಅಭಿಪ್ರಾಯ ಅತಿ ಶೀಘ್ರವಾಗಿ ಒದಗಿಸಿಕೊಡಲು ತೀರ್ಮಾನಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ.ಕಣವಿ ಇದರ ಜವಾಬ್ದಾರಿ ಹೊತ್ತುಕೊಂಡರು. ಬಸಾಪುರ ಕೆರೆ ಬಲ್ಡೋಟ ಕಾರ್ಖಾನೆಗೆ 2007ರಲ್ಲಿ ಕೆ.ಐ.ಏ.ಡಿ.ಬಿ ಮೂಲಕ ಭೂಸ್ವಾಧೀನ ಮಾಡಿದ 1034 ಎಕರೆಗೆ ಮತ್ತು ಬಸಾಪುರ ಸ. ನಂ. 143ರ 44.35 ಎಕರೆ ಕೆರೆ 2007ರಲ್ಲಿ ಇದು ಕೇವಲ ಭೂಮಂಜೂರಾತಿ ಮೂಲಕ ಜಿಲ್ಲಾಧಿಕಾರಿಗಳು ಮಾಡಿದ ಆದೇಶವಾಗಿದೆ. ಕೆರೆ ಮಂಜೂರಿ ಮತ್ತು ಕೆಐಎಡಿಬಿ ಭೂಸ್ವಾಧೀನ ಇವೆರಡೂ ಬೇರೆ ಬೇರೆಯಾಗಿವೆ. ಸುಪ್ರೀಂ ಕೋರ್ಟನಲ್ಲಿ ಬಸಾಪುರ ಕೆರೆ ಪ್ರಸ್ತಾವನೆ ಇಲ್ಲ. ಹಾಗಿದ್ದಾಗ ಕೋರ್ಟ್ ಆದೇಶ ಕೆರೆಗೆ ಅನ್ವಹಿಸುವುದಿಲ್ಲ ಎನ್ನುವ ದಿಟ್ಟ ಅಭಿಪ್ರಾಯಕ್ಕೆ ವೇದಿಕೆ ಬದ್ಧವಾಗಿದೆ ಎಂದು ವೇದಿಕೆ ಪುನರುಚ್ಚರಿಸಿದೆ.

ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಡಾ. ಬಸವರಾಜ ಪೂಜಾರ, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಬಾವಿ, ಪ್ರಕಾಶಕಿ ಮಾಲಾ ಬಡಿಗೇರ, ಗಂಗಮ್ಮ ಕುರುಗೋಡು, ರಂಗಕರ್ಮಿ ಲಕ್ಷಣ ಪೀರಗಾರ, ಮೂಕಪ್ಪ ಮೇಸ್ತ್ರೀ ಬಸಾಪುರ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ಬಸವರಾಜ ಪೂಜಾರ ಕಾಸನಕಂಡಿ, ಎಸ್. ಮಹಾದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಮುದುಕಪ್ಪ ಕನ್ನಾಳ, ಮಲ್ಲಪ್ಪ ಎಸ್. ಮಾದಿನೂರು, ಮಖಬುಲ್ ರಾಯಚೂರು, ಶಿವಪ್ಪ ಹಲಗೇರಿ, ಭೀಮಪ್ಪ ಯಲಬುರ್ಗಾ ಪಾಲ್ಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande