
ಬೆಂಗಳೂರು, 22 ಮೇ (ಹಿ.ಸ.) :
ಆ್ಯಂಕರ್ : ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಯೋಜನೆಯಾದ “ಭೂ ಗ್ಯಾರಂಟಿ” ಅಡಿಯಲ್ಲಿ “ನನ್ನ ಖಾತಾ ನನ್ನ ಹಕ್ಕು” ಅಭಿಯಾನವನ್ನು ನಾಳೆ ಬೆಂಗಳೂರಿನ 52 ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದೆ. ನಾಗರಿಕರ ಖಾತೆ ಮತ್ತು ಆಸ್ತಿ ಸಂಬಂಧಿತ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಈ ವಿಶೇಷ ಶಿಬಿರಗಳನ್ನು ಆಯೋಜಿಸಲಾಗಿದೆ.
ಈ ಅಭಿಯಾನದ ಮೂಲಕ ಖಾತೆ ವರ್ಗಾವಣೆ, ಇ-ಖಾತೆ, ತೆರಿಗೆ ದಾಖಲೆ ತಿದ್ದುಪಡಿ, ಮಾಲೀಕತ್ವ ಸಂಬಂಧಿತ ದಾಖಲೆಗಳ ಪರಿಶೀಲನೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಸ್ಥಳದಲ್ಲೇ ನೆರವು ನೀಡಲಿದ್ದಾರೆ.
ಜಿಬಿಎ ಸಾರ್ವಜನಿಕರಿಗೆ ತಮ್ಮ ಸಮೀಪದ ಶಿಬಿರ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಮನವಿ ಮಾಡಿದೆ. ಆಸ್ತಿ ದಾಖಲೆಗಳು, ತೆರಿಗೆ ಪಾವತಿ ರಸೀದಿ, ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು ಎಂದು ಸೂಚಿಸಲಾಗಿದೆ.
ಬೆಂಗಳೂರು ನಾಗರಿಕರು ತಮ್ಮ ಹಕ್ಕಿನ ಖಾತೆ ಪಡೆಯಲು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.