ಕುಷ್ಟಗಿ ಪುರಸಭೆಯಿಂದ ಅರ್ಜಿ ಆಹ್ವಾನ
ಕುಷ್ಟಗಿ, 22 ಮೇ (ಹಿ.ಸ.) : ಆ್ಯಂಕರ್ : ಕುಷ್ಟಗಿ ಪುರಸಭೆಯ ಸನ್ 2026-27ನೇ ಸಾಲಿನ ಎಸ್.ಎಫ್.ಸಿ ಶೇ.7.25 ಹಾಗೂ ಶೇ.5ರ ವೈಯಕ್ತಿಕ ಕಾರ್ಯಕ್ರಮಕ್ಕೆ ಅನುದಾನ ಮಂಜುರಾಗಿದ್ದು, ಅದರಂತೆ ವೈಯಕ್ತಿಕ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2026-27ನೇ ಸಾಲಿನ ಎಸ್.ಎಫ್.ಸಿ ಶೇ7.25 ಹಿಂದು
ಕುಷ್ಟಗಿ ಪುರಸಭೆಯಿಂದ ಅರ್ಜಿ ಆಹ್ವಾನ


ಕುಷ್ಟಗಿ, 22 ಮೇ (ಹಿ.ಸ.) :

ಆ್ಯಂಕರ್ : ಕುಷ್ಟಗಿ ಪುರಸಭೆಯ ಸನ್ 2026-27ನೇ ಸಾಲಿನ ಎಸ್.ಎಫ್.ಸಿ ಶೇ.7.25 ಹಾಗೂ ಶೇ.5ರ ವೈಯಕ್ತಿಕ ಕಾರ್ಯಕ್ರಮಕ್ಕೆ ಅನುದಾನ ಮಂಜುರಾಗಿದ್ದು, ಅದರಂತೆ ವೈಯಕ್ತಿಕ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2026-27ನೇ ಸಾಲಿನ ಎಸ್.ಎಫ್.ಸಿ ಶೇ7.25 ಹಿಂದುಳಿದ ವರ್ಗದವರಿಗೆ ಸ್ವಂತ ಉದ್ಯೋಗಕ್ಕಾಗಿ ಬ್ಯಾಂಕಿನಿಂದ ಸಾಲ ಪಡೆದವರಿಗೆ ಸಹಾಯಧನ ಹಾಗೂ ಶೇ.5ರ ವಿಕಲಚೇತನರಿಗೆ ಶಸ್ತ್ರಚಿಕಿತ್ಸೆಗೆ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಈ ಅರ್ಜಿಗಳನ್ನು ಜೂನ್ 15ರೊಳಗಾಗಿ ಕುಷ್ಟಗಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ವೇಳೆಯಲ್ಲೆ ಸಂಪರ್ಕಿಸಲು ಕುಷ್ಟಗಿ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande