ಮೇ 24ರಂದು ಕನಕೋದ್ಯಮಿಗಳ ಸಮ್ಮಿಲನ
ಬೆಂಗಳೂರು, 22 ಮೇ (ಹಿ.ಸ.) : ಆ್ಯಂಕರ್ : ಹಾಲುಮತ ಉದ್ಯಮಿಗಳ ಸಂಘದ ವತಿಯಿಂದ 2026ರ ಮೇ 24 ರಂದು ಭಾನುವಾರ ಬೆಂಗಳೂರಿನ ಜ್ಞಾನಗಂಗಾ ನಗರದ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಶ್ರೀ ಕನಕದಾಸ ಸಮುದಾಯ ಭವನದಲ್ಲಿ ಕನಕೋದ್ಯಮಿಗಳ ಸಮ್ಮಿಲನ ಮತ್ತು ಉದ್ಯಮಶೀಲತಾ ಅವಕಾಶಗಳ ಅರಿವು ಕಾರ್ಯಕ್ರಮವನ್ನು ಆಯೋಜಿಸ
ಮೇ 24ರಂದು ಕನಕೋದ್ಯಮಿಗಳ ಸಮ್ಮಿಲನ


ಬೆಂಗಳೂರು, 22 ಮೇ (ಹಿ.ಸ.) :

ಆ್ಯಂಕರ್ : ಹಾಲುಮತ ಉದ್ಯಮಿಗಳ ಸಂಘದ ವತಿಯಿಂದ 2026ರ ಮೇ 24 ರಂದು ಭಾನುವಾರ ಬೆಂಗಳೂರಿನ ಜ್ಞಾನಗಂಗಾ ನಗರದ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಶ್ರೀ ಕನಕದಾಸ ಸಮುದಾಯ ಭವನದಲ್ಲಿ ಕನಕೋದ್ಯಮಿಗಳ ಸಮ್ಮಿಲನ ಮತ್ತು ಉದ್ಯಮಶೀಲತಾ ಅವಕಾಶಗಳ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರದ ಉತ್ತೇಜನಗಳು ವಿಷಯದ ಕುರಿತು ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸಿದ್ದಲಿಂಗಪ್ಪ ಪೂಜಾರಿ ಅವರು ಉಪನ್ಯಾಸ ನೀಡುವರು.

ಉದ್ಯಮಶೀಲತಾ ಅಭಿವೃದ್ಧಿ ವಿಷಯ ಕುರಿತು ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಡಾಕ್ ಜಂಟಿ ನಿರ್ದೇಶಕರಾದ ಗ್ಯಾನಪ್ಪ ಯು ಹುಡೇದ್ ಅವರು ಉಪನ್ಯಾಸ ನೀಡುವರು.

ಸಮಾರಂಭದಲ್ಲಿ ಯಶಸ್ವಿ ಕನಕೋದ್ಯಮಿಗಳಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುವುದು. ಕನಕೋದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಹಾಲುಮತ ಉದ್ಯಮಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ರಾಮಯ್ಯ ಅವರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande