
ಬಳ್ಳಾರಿ, 22 ಮೇ (ಹಿ.ಸ.) :
ಆ್ಯಂಕರ್ : ಕಳೆದ ತಿಂಗಳು ನಾನು ನೀಡಿದ ಭರವಸೆಯಂತೆ ನಮ್ಮ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ 10 ಲಕ್ಷ ರೂ.ಗಳ ಚೆಕ್ ನೀಡಿರುವೆ, ಆಶ್ರಮದ ಕೆಲಸ ಕಾರ್ಯಗಳು ಸಾಂಗವಾಗಿ ನಡೆಯಲಿ ಎಂದು ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದ್ದಾರೆ.
ಬಳ್ಳಾರಿಯ ಗಾಂಧಿನಗರದಲ್ಲಿರುವ ಶ್ರೀರಾಮಕೃಷ್ನ ವಿವೇಕಾನಂದ ಆಶ್ರಮಕ್ಕೆ ಇಂದು ಭೇಟಿ ನೀಡಿ, ಆಶ್ರಮದ ಅಭಿವೃದ್ಧಿಗಾಗಿ 10 ಲಕ್ಷ ರೂ.ಗಳ ಚೆಕ್ ನೀಡಿದರು.
ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮವು ದೇಶ ಹಾಗೂ ಜಗತ್ತಿನಾದ್ಯಂತ ಮಾನವ ಅಭಿವೃದ್ಧಿಗೆ ನೈತಿಕ ತತ್ವ ಸಾರುವ ಕೆಲಸ ಮಾಡುತ್ತಿದ್ದು, ನಗರದಲ್ಲಿಯೂ ಕೂಡ ಮೊದಲಿನಿಂದ ಈ ಮಹತ್ಕಾರ್ಯ ನಡೆಯುತ್ತಿದೆ, ಮುಂದೆ ಕೂಡ ನಡೆಯಲಿ ಎಂದರು.
ಕಳೆದ ತಿಂಗಳು ನಡೆದ ಕಾರ್ಯಕ್ರಮದಲ್ಲಿ ಕೊಟ್ಟ ಭರವಸೆ ಪೂರೈಸಿದ್ದೇನೆ, ಅದೇ ರೀತಿ ಸಾಧುಗಳ ವಾಸಕ್ಕೆ ಕೊಠಡಿಗಳ ನಿರ್ಮಾಣ ಕಾರ್ಯ ಶೀಘ್ರ ಆರಂಭಿಸಲಾಗುವುದು, ತಾವು ದಿನಾಂಕ ತಿಳಿಸಿದ ದಿನ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿ, ಕ್ರಿಯಾ ಯೋಜನೆ ತಯಾರಿಸಿ, ಕೆಲಸ ಆರಭಿಸಲಿದ್ದಾರೆ ಎಂದರು.
ಆಶ್ರಮದ ಶ್ರೀ ಮಂಗಳನಾಥ ಆನಂದಜೀಯವರು ಆಶ್ರಮದ ಪರ ಚೆಕ್ ಸ್ವೀಕರಿಸಿ, ಶಾಸಕರನ್ನು ಆಶೀರ್ವದಿಸಿ ಮಾತನಾಡಿ; ಶಾಸಕ ನಾರಾ ಭರತ್ ರೆಡ್ಡಿ ಕೊಟ್ಟ ಮಾತಿನಂತೆ ಇಂದು ಚೆಕ್ ವಿತರಿಸಿದ್ದಾರೆ, ನಾವೇ ಬಂದು ಚೆಕ್ ಸಂಗ್ರಹಿಸುವುದಾಗಿ ಹೇಳಿದರೂ ಸಹ ಅವರು ತಾವೇ ಬಂದು ಚೆಕ್ ನೀಡಿರುವುದು ಅವರ ಸರಳತೆಗೆ ಸಾಕ್ಷಿ ಎಂದರು.
ಈ ಸಂದರ್ಭ ನಮ್ಮ ಪಕ್ಷದ ಮುಖಂಡ ವಾಸು ರೆಡ್ಡಿ ಮತ್ತಿತರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್