
ಬಳ್ಳಾರಿ, 22 ಮೇ (ಹಿ.ಸ.) :
ಆ್ಯಂಕರ್ : ಇಂದು ಬೆಳಗ್ಗೆ 9.00 ಗಂಟೆಗೆ ಸಂಸ್ಥೆಯ ಆವರಣದಲ್ಲಿ ದಿವಂಗತ ಕಾಕರ್ಲತೋಟ್ ಕನುಗೋಲು ತಿಮ್ಮಪ್ಪನವರ 26ನೇ ಪುಣ್ಯಸ್ಮರಣೆಯನ್ನು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಸಲ್ಲಿಸುವುದರೊಂದಿಗೆ ಆಚರಿಸಲಾಯಿತು,
ನಂತರ, ನಮ್ಮ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಉಚಿತ ಆಸ್ಪತ್ರೆಗೆ ಭೇಟಿ ನೀಡಿ ಹೊರರೋಗಿಗಳಿಗೆ ಬಿಸ್ಕತ್, ಹಾಲು ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್, ಹಿರಿಯ ಉಪಾಧ್ಯಕ್ಷರಾದ, ಶ್ರೀ ಎಸ್.ದೊಡ್ಡನಗೌಡ, ಗೌರವಕಾರ್ಯದರ್ಶಿಗಳಾದ, ಕೆ.ಸಿ.ಸುರೇಶಬಾಬು, ಶ್ರೀ ಕೆ.ಚೆನ್ನಪ್ಪ, ಮಾಜಿ ಅಧ್ಯಕ್ಷರು, ಶ್ರೀ ಕೆ.ಕೃಷ್ಣ, ಮಾಜಿ ಖಜಾಂಚಿಗಳು, ಉಪಾಧ್ಯಕ್ಷರಾದ, ಶ್ರೀ ಸೊಂತ್ ಗಿರಿಧರ, ಜಂಟಿ ಕಾರ್ಯದರ್ಶಿಗಳಾದ ಡಾ.ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ಎಪಿಎಂ.ಸಿ ಕಮಿಟಿ ಚೇರ್ಮನ್ ಸುರೇಂದ್ರ ಬಪಾನ್ ಉಚಿತ ಆಸ್ಪತ್ರೆ ಚೇರ್ಮನ್, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ಶ್ರೀ ಕೆ.ಶಾಮ್ ಸುಂದರ್, ಆಜೀವ ಸದಸ್ಯರು, ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್