ಕರಾವಳಿ ಮೀನುಗಾರರ ಸಮಸ್ಯೆಗಳ ಕುರಿತು ಸಚಿವರ ಮಹತ್ವದ ಸಭೆ
ನಾನಾ
Meeting


ಬೆಂಗಳೂರು, 21 ಮೇ (ಹಿ.ಸ.) :

ಆ್ಯಂಕರ್ : ದಿನೇಶ್ ಗುಂಡೂರಾವ್ ಅವರು ವಿಕಾಸಸೌಧದಲ್ಲಿ ಇಂದು ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಅವರೊಂದಿಗೆ ಕರಾವಳಿ ಮೀನುಗಾರರ ನಾನಾ ಸಮಸ್ಯೆಗಳ ಕುರಿತಂತೆ ಮಹತ್ವದ ಸಭೆ ನಡೆಸಿದರು.

ಸಭೆಯಲ್ಲಿ ಕರಾವಳಿ ಭಾಗದ ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯಕ್ಕೆ ಆಧಾರವಾಗಿರುವ ಮೋಟಾರೀಕೃತ ನಾಡದೋಣಿಗಳಿಗೆ ಅಗತ್ಯ ಪ್ರಮಾಣದಲ್ಲಿ ಸೀಮೆಎಣ್ಣೆ ಪೂರೈಕೆ ಮಾಡುವ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಯಿತು. ವಾರ್ಷಿಕವಾಗಿ 8,030 ದೋಣಿಗಳಿಗೆ ಪ್ರತಿ ತಿಂಗಳು 300 ಲೀಟರ್ನಂತೆ ಒಟ್ಟು 24,090 ಕಿಲೋಲೀಟರ್ ಸೀಮೆಎಣ್ಣೆಯ ಅವಶ್ಯಕತೆ ಇರುವುದಾಗಿ ಸಭೆಯಲ್ಲಿ ವಿವರಿಸಲಾಯಿತು.

ರಾಜ್ಯ ಸರ್ಕಾರ ಮೀನುಗಾರರ ಬೆನ್ನೆಲುಬಾಗಿ ನಿಂತು ನಿರಂತರ ನೆರವು ನೀಡುತ್ತಿದ್ದು, ಕೈಗಾರಿಕಾ ಸೀಮೆಎಣ್ಣೆಗೆ ಪ್ರತಿ ಲೀಟರ್ಗೆ 35 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಹಾಯಧನ ಮತ್ತು ಸೀಮೆಎಣ್ಣೆ ವಿತರಣೆಯ ವಿವರ:

2023-24ನೇ ಸಾಲು:

7,364.835 ಕಿಲೋಲೀಟರ್ ಸೀಮೆಎಣ್ಣೆ ವಿತರಣೆ ಮಾಡಲಾಗಿದ್ದು, 25.77 ಕೋಟಿ ರೂಪಾಯಿ ಸಹಾಯಧನ ಭರಿಸಲಾಗಿದೆ.

2024-25ನೇ ಸಾಲು:

11,811.80 ಕಿಲೋಲೀಟರ್ ಸೀಮೆಎಣ್ಣೆ ವಿತರಣೆ ಮಾಡಲಾಗಿದ್ದು, 41.34 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ.

2025-26ನೇ ಸಾಲು:

11,169.42 ಕಿಲೋಲೀಟರ್ ಸೀಮೆಎಣ್ಣೆ ವಿತರಣೆ ಮಾಡಲಾಗಿದ್ದು, 39.09 ಕೋಟಿ ರೂಪಾಯಿ ಸಹಾಯಧನ ಭರಿಸಲಾಗಿದೆ.

ಸಭೆಯಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ್ ಗಂಟಿಹೊಳಿ, ದಿನಕರ್ ಶೆಟ್ಟಿ ಸೇರಿದಂತೆ ಮೀನುಗಾರಿಕಾ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande